ನ್ಯೂಸ್ ನಾಟೌಟ್ : ಸುಳ್ಯದ ಕುರುಂಜಿಭಾಗ್ನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಅಕ್ರಮ ಪ್ರವೇಶ ಮಾಡಿ ಅಲ್ಲಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರನ್ನು ಬೆದರಿಸಿರುವುದಾಗಿ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿನ್ನೆ (ಅ.6) ರಂದು ಸುದ್ದಿಗೋಷ್ಠಿ ಕೆರದಿದ್ದ ಡಾ| ಜ್ಯೋತಿ ಆರ್ ಪ್ರಸಾದ್ ಕಾಲೇಜಿಗೆ ಅಕ್ರಮ ಪ್ರವೇಶದ ಬಗ್ಗೆ ಆರೋಪಿಸಿದ್ದರು. ಇದಕ್ಕೆ ಸುಳ್ಯದ ಡಾ. ರೇಣುಕಾ ಪ್ರಸಾದ್ ಒಡೆತನದಲ್ಲಿದ್ದ ಕೆವಿಜಿ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಮೇಲೆ ನಾವು ಯಾವುದೇ ದಬ್ಬಾಳಿಕೆ ಮಾಡಿಲ್ಲ, ಒತ್ತಡವನ್ನೂ ಹೇರಿಲ್ಲ ಎಂದು ಕೆವಿಜಿ ಅಕಾಡೆಮಿ ಆಫ್ ಲಿಬರಲ್ ಅಧ್ಯಕ್ಷ ಡಾ. ಕೆ.ವಿ ಚಿದಾನಂದರು ಸ್ಪಷ್ಟನೆ ನೀಡಿದ್ದರು.ಇದೀಗ ಡಾ.ಜ್ಯೋತಿ ಆರ್. ಪ್ರಸಾದ್ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.
ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಕಾಂತಮಂಗಲ ನಿವಾಸಿ ಡಾ| ಜ್ಯೋತಿ ಆರ್ ಪ್ರಸಾದ್ ನೀಡಿದ ದೂರಿನಂತೆ ಐಪಿಸಿ ಕಲಂ 448, 506 ಜೊತೆಗೆ 34 ಯಂತೆ ಪ್ರಕರಣ ದಾಖಲಾಗಿದೆ. ಡಾ |ಕೆ.ವಿ ಚಿದಾನಂದ, ಅವರ ಪತ್ನಿ ಶೋಭಾ ಚಿದಾನಂದ, ಮಗ ಅಕ್ಷಯ್ ಕೆ.ಸಿ, ಮಗಳು ಡಾ| ಐಶ್ವರ್ಯ, ಸಂಬಂಧಿ ಹೇಮನಾಥ ಕೆ ವಿ, ಜಗದೀಶ್ ಅಡ್ತಲೆ ಮತ್ತು ಇತರರು ಅಕ್ರಮ ಪ್ರವೇಶ ಮಾಡಿದವರೆಂದು ದೂರಿನಲ್ಲಿ ತಿಳಿಸಲಾಗಿದೆ.
ಸೆ.6 ರಂದು ತಾನು ಮಂಗಳೂರಿಗೆ ಹೋಗಿದ್ದು, ಈ ವೇಳೆ ಕುರುಂಜಿಭಾಗ್ನಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಅಕ್ರಮ ಪ್ರವೇಶ ಮಾಡಿದ್ದಾರೆ. ಅಲ್ಲಿದ್ದ ಪ್ರಾಂಶುಪಾಲರು ಹಾಗೂ ಸಿಬ್ಬಂದಿಯವರ ಮೊಬೈಲ್ಗಳನ್ನು ಕೇಳಿ ಪಡೆದು, ಸಿ ಸಿ ಕ್ಯಾಮರಗಳ ವಿಡಿಯೋ ಮತ್ತು ಇತರ ಮಾಹಿತಿಗಳನ್ನು ಪಡೆದು, ಮೊಬೈಲ್ಗಳನ್ನು ಹಿಂತಿರುಗಿಸಿ, ಬೆದರಿಸಿ ಹೋಗಿರುತ್ತಾರೆ ಎಂದು ಡಾ.ಜ್ಯೋತಿ ರೇಣುಕಾ ಪ್ರಸಾದ್ ದೂರಿನಲ್ಲಿ ತಿಳಿಸಿದ್ದಾರೆ.