ನ್ಯೂಸ್ ನಾಟೌಟ್ : ಸುಳ್ಯದಲ್ಲಿ ಅಕ್ಟೋಬರ್ ತಿಂಗಳಲ್ಲಿ ಮಹಿಳಾ ಸಮಾವೇಶ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಸುಳ್ಯ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ. ಸುಳ್ಯ ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ ವತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಈ ಮಾಹಿತಿ ನೀಡುತ್ತಾ ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಯನ್ನೂ ಸಲ್ಲಿಸಿದರು.
ಈ ಬಗ್ಗೆ ಟ್ರಸ್ಟ್ ಅಧ್ಯಕ್ಷೆ ಇಂದಿರಾ ರಾಜಶೇಖರ ರೈಯವರು ಮಾತನಾಡುತ್ತಾ ಸಂತಸ ವ್ಯಕ್ತ ಪಡಿಸಿದರು. ಹಲವಾರು ವರ್ಷಗಳ ಕನಸು ಇದು. ಮಹಿಳಾ ಮೀಸಲಾತಿ ಬಿಲ್ ನ್ನು ಪಾಸ್ ಮಾಡಿ ಇಡೀ ದೇಶದ ಮಹಿಳೆಯರಿಗೆ ಅವಕಾಶ ನೀಡಿರುವ ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೊದಿಯವರಿಗೆ ಈ ಮೂಲಕ ಅಭಿನಂದನೆಯನ್ನು ಸಲ್ಲಿಸಲೇಬೇಕು ಎಂದು ಹೇಳಿದರು.
ಇದಕ್ಕಾಗಿ ಪ್ರಧಾನಿ ಮೋದಿಯವರಿಗೆ ಮತ್ತೊಮ್ಮೆ ಅಭಿನಂದನೆ ಸಲ್ಲಿಸುವ ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ.ಮುಂದಿನ ತಿಂಗಳು ದಿನಾಂಕ ನಿಗದಿ ಮಾಡಿ ಈ ಸಮಾವೇಶ ಏರ್ಪಾಟು ಮಾಡಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಗುಣವತಿ ಕೊಲಂತ್ತಡ್ಕ, ಕೋಶಾಧಿಕಾರಿ ಜಯಂತಿ ಜನಾರ್ದನ, ಸಹ ಕೋಶಾಧಿಕಾರಿ ಶಾರದಾ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಪುಷ್ಪಾ ಮೇದಪ್ಪ, ನಿರ್ದೇಶಕರಾದ ದಿವ್ಯ ಮಡಪ್ಪಾಡಿ, ಸವಿತಾ ಕಾಯರ, ಲೋಲಾಕ್ಷಿ ವೀಣಾ ಮೋಂಟಡ್ಕ ಉಪಸ್ಥಿತರಿದ್ದರು.