ನ್ಯೂಸ್ ನಾಟೌಟ್ : ಇತ್ತೀಚೆಗೆ ಸೋಶಿಯಲ್ ಮೀಡಿಯಾ ಹವಾ ಜಾಸ್ತಿಯಾಗಿದೆ.ಅದರ ಬಳಕೆ ಜಾಸ್ತಿಯಾಗುತ್ತಿದ್ದಂತೆ ರೀಲ್ಸ್ ಗಾಗಿ ಯುವಕ ಯುವತಿಯರು ಮುಗಿ ಬೀಳುತ್ತಿದ್ದಾರೆ.ಆದರೆ ಕೆಲವೊಂದು ವಿಷಯಗಳು ವಾದ ವಿವಾದಗಳನ್ನೇ ಎಬ್ಬಿಸುವಂತೆ ಮಾಡುತ್ತಿವೆ.ಇದೀಗ ಇಲ್ಲೊಂದು ವಿಡಿಯೋ ಭಾರಿ ಚರ್ಚೆಗೆ ಕಾರಣವಾಗಿದೆ.
ಬುರ್ಖಾ ಹಾಕಿದ ಯುವತಿ ಮತ್ತು ಟೋಪಿ ಧರಿಸಿದ ಯುವಕ ಜೈ ಶ್ರೀರಾಮ್ (Jai Shree Ram) ಎಂದು ಹೇಳಿದ್ದಾರೆ ಕಾರಣಕ್ಕೆ ಸಾಮಾಜಿಕ ಜಾಲತಾಣದ (Threatening on Social Media) ಮೂಲಕ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದಾನೆ. ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ ನಡೆದಿದೆ ಎನ್ನಲಾಗಿದೆ.
ಒಬ್ಬ ಯುವಕ ಮತ್ತು ಯುವತಿ ಇಬ್ಬರೂ ಒಬ್ಬರ ಬಳಿಕ ಇನ್ನೊಬ್ಬರು ಜೈಶ್ರೀರಾಂ ಎನ್ನುತ್ತಾರೆ. ಈ ದೃಶ್ಯದ ಬಳಿಕ ಇನ್ನೊಬ್ಬ ಯುವಕ ವಿಡಿಯೋ ಮಾಡುತ್ತಾ ಈ ಜೋಡಿಗೆ ಬೆದರಿಕೆ ಹಾಕುತ್ತಾನೆ.ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ.ಇದರ ಬಗ್ಗೆ ಸೈಬರ್ ಪೊಲೀಸರು (Bangalore Police) ತನಿಖೆ ನಡೆಸುತ್ತಿದ್ದು, ವಿಡಿಯೋದಲ್ಲಿ ಧಮಕಿ ಹಾಕಿದ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಯುವಕ ಉರ್ದು ಭಾಷೆಯಲ್ಲಿ ಬೈದಿದ್ದು,‘ಬುರ್ಖಾ ತೆಗೆದು ಏನಾದ್ರು ಮಾತನಾಡಿ.ಮುಸ್ಲಿಂರನ್ನು ಮಧ್ಯಕ್ಕೆ ತಂದು ಜೈ ಶ್ರೀರಾಂ ಅಂತ ಹೇಳ್ಬೇಡಿ ಎನ್ನುತ್ತಾ ಅವಾಚ್ಯ ಪದಗಳಿಂದ ನಿಂದಿಸಿ ಸೀಳಿ ಬಿಡ್ತೀನಿ ಎಂದು ಬೆದರಿಕೆಯನ್ನೂ ಹಾಕಲಾಗಿದೆ.
ಈ ಬಗ್ಗೆ ಬೆಂಗಳೂರು ಪೊಲೀಸರು ಇದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ವಿಡಿಯೊದ ಹಿನ್ನೆಲೆಯನ್ನು ಒಂದೆರಡು ದಿನದಲ್ಲಿ ತಿಳಿಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.