ನ್ಯೂಸ್ ನಾಟೌಟ್ : ಅನೇಕರಿಗೆ ಬೆಕ್ಕುಗಳೆಂದ್ರೆ ಪ್ರಾಣ.ಎಷ್ಟೇ ಕಷ್ಟವಾದರೂ ಮನೆಗೊಂದು ಬೆಕ್ಕು ಇರಲಿ ಎಂದು ಸಾಕುತ್ತಾರೆ.ಇಲಿಗಳನ್ನು ಓಡಿಸಲು ಕೂಡ ಈ ಬೆಕ್ಕುಗಳು ಸಹಕರಿಸುತ್ತವೆ.ಆದರೆ ಬೆಕ್ಕುಗಳು ಮನೆ ಯಜಮಾನನಿಗೆ ಕ್ಷಾಟ್ಲೆ ಕೊಟ್ರೆ ಹೇಗೆ? ಅದು ಈ ರೇಂಜ್ ಗಾ?
ಈ ವೀಡಿಯೋ ನೋಡಿದರೆ ಬೆಕ್ಕುಗಳೆಂದರೆ ಇಷ್ಟೊಂದು ಭಯ ಹುಟ್ಟಿಸಬಹುದೇ ಎಂದು ಆಶ್ಚರ್ಯ ಪಡುತ್ತೀರಿ. ಬೆಕ್ಕೊಂದು ಕಾಡುಪ್ರಾಣಿಯಂತೆ ನಡೆದುಕೊಂಡ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿವರಗಳಿಗೆ ಹೋದರೆ, ಒಂದು ಮನೆಯಲ್ಲಿ ದಂಪತಿಯಿದ್ದು, ಮನೆಯಲ್ಲಿ ವಸ್ತುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸುತ್ತಾ ಮನೆಯನ್ನು ಒಪ್ಪಓರಣ ಮಾಡುತ್ತಿರುತ್ತಾರೆ.
ಮನೆಯಲ್ಲಿ ಸಾಕಿದ ಬೆಕ್ಕು ಕೂಡ ಅವರ ಮಧ್ಯೆ ಸುಳಿದಾಡುತ್ತಿರುತ್ತದೆ. ಈ ಮಧ್ಯೆ ಮನೆಯ ಯಜಮಾನ ಫ್ರಿಡ್ಜ್ ಹತ್ತಿರ ಕೆಲಸ ಮಾಡುತ್ತಿರುತ್ತಾರೆ. ಆತನ ಕಾಲುಗಳ ಬಳಿ ಬೆಕ್ಕು ಇದೆ.ಇದ್ದಕ್ಕಿದ್ದ ಹಾಗೆ ಬೆಕ್ಕು ಕಚ್ಚಲು ಶುರು ಮಾಡಿದೆ.
ಆತ ನಿಜಕ್ಕೂ ಆಘಾತಕ್ಕೊಳಗಾಗುತ್ತಾನೆ ಮತ್ತು ಭಯದಿಂದ ಪರದೆಯ ಹಿಂದೆ ಅಡಗಿಕೊಳ್ಳುತ್ತಾನೆ. ಅಲ್ಲಿಗೂ ಬಿಡದೆ ಆತನ ಹಿಂದೆಯೇ ಬೆಕ್ಕು ಬಂದು ದಾಳಿ ಮಾಡಿದೆ. ಅಲ್ಲಿ ಇಲ್ಲಿ ಅಂತೆಲ್ಲಾ ಬಚ್ಚಿಟ್ಟುಕೊಂಡು ಬೆಕ್ಕಿನ ದಾಳಿಯಿಂದ ಬಚಾವಾಗಲು ಆತ ಪ್ರಯುತ್ನಿಸುತ್ತಾನೆ. ಆದರೂ ಬೆಕ್ಕು ಆತನ ಮೇಲೆ ದಾಳಿ ಮಾಡಲು ಪ್ರಯತ್ನಿಸುತ್ತಲೇ ಇರುತ್ತದೆ. ಕೊನೆಗೂ ಬೆಕ್ಕಿನ ದಾಳಿಯಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ಅಷ್ಟುಹೊತ್ತಿಗೆ ದಂಪತಿಯಿಬ್ಬರೂ ಹೈರಾಣಗೊಂಡಿರುತ್ತಾರೆ.ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಈಗಾಗಲೇ 9.4 ಮಿಲಿಯನ್ ಜನರು ವೀಕ್ಷಿಸಿದ್ದಾರೆ. ಅಸಲಿಗೆ ಯಾವುದೇ ಪ್ರಚೋದನೆ ಇಲ್ಲದೆ, ಕಾರಣವಿಲ್ಲದೆ ಬೆಕ್ಕು ತನ್ನ ಮಾಲೀಕನ ಮೇಲೆ ಏಕೆ ದಾಳಿ ಮಾಡಿದೆ ಎಂದು ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ವಿಭಿನ್ನ ರೀತಿಯ ಕಾಮೆಂಟ್ಗಳನ್ನು ಮಾಡಲಾಗುತ್ತಿದೆ. ಕೆಲವರು ಮಾಲೀಕರ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ತಮ್ಮ ಬೆಕ್ಕುಗಳೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ನೀವೂ ಆ ವಿಡಿಯೋ ನೋಡಿ.