ಕರಾವಳಿ

ನದಿ ಬಳಿ ನಿಲ್ಲಿಸಿದ್ದ ಪಲ್ಸರ್ ಬೈಕ್ ಮಾಯಾ..ಸಿಕ್ಕಿದ್ದೆಲ್ಲಿ ಗೊತ್ತಾ?

224
Spread the love

ಕಳಂಜ: ನದಿಯ ಬದಿ ನಿಲ್ಲಿಸಿದ ಪಲ್ಸರ್ ಬೈಕೊಂದು ಮಳೆ ನೀರಿಗೆ ಕೊಚ್ಚಿ ಹೋಗಿ 100 ಮೀ ದೂರದಲ್ಲಿ ಎರಡು ದಿನಗಳ ಬಳಿಕ ಪತ್ತೆಯಾದ ಘಟನೆ ವರದಿಯಾಗಿದೆ. ಕಳಂಜ ಗ್ರಾಮದ ಅಯ್ಯನಕಟ್ಟೆಯಲ್ಲಿ ಹೊಳೆಯೊಂದಿದ್ದು ಅದರ ಬದಿಯಲ್ಲಿ ಅ.25 ರ ಸಂಜೆ ರಂಜನ್ ಮರಂಗಳ ಎಂಬವರು ತನ್ನ ಪಲ್ಸರ್ ಬೈಕ್ ಇರಿಸಿ ಬೆಳ್ಳಾರೆಗೆ ತೆರಳಿದ್ದರು. ಆ ವೇಳೆ ಸುರಿದ ಭಾರಿ ಮಳೆಗೆ ಭಾರಿ ಪ್ರಮಾಣದ ನೀರು ಬಂದಿದ್ದು ವಾಪಸ್‌ ಬರುವಾಗ ಬೈಕ್ ನಿಲ್ಲಿಸಿದ ಜಾಗ ನೀರು ಆವರಿಸಿ ಬೈಕ್ ಕಾಣೆಯಾಗಿತ್ತು. ಮರುದಿನ ಹುಡುಕಲಾಯಿತಾದರೂ ಸಿಕ್ಕಿರಲಿಲ್ಲ. ಆದರೆ ಇಂದು ಬೈಕ್ ನಿಲ್ಲಿಸಿದ್ದ 100 ಮೀಟರ್ ದೂರದಲ್ಲಿ ಹೊಳೆಯೊಳಗೆ ಕಂಡುಬಂದಿದೆ ಎಂದು ತಿಳಿದು ಬಂದಿದೆ.

See also  ಅಂತಾರಾಷ್ಟ್ರೀಯ ನ್ಯತ್ಯ ಸ್ಪರ್ಧೆ: ತೊಡಿಕಾನದ ಧನ್ಯ ಮಯ್ಯ ಪ್ರಥಮ
  Ad Widget   Ad Widget   Ad Widget