ನ್ಯೂಸ್ ನಾಟೌಟ್: ಹಲವು ಮದುವೆಗಳು ಕೆಲವೊಮ್ಮೆ ಕೊನೆ ಕ್ಷಣದಲ್ಲಿ ಹುಡುಗ ಅಥವಾ ಹುಡುಗಿಗೆ ಸಂಬಂಧ ಇರೋದು ಗೊತ್ತಾಗಿ ಮದ್ವೆ ಕ್ಯಾನ್ಸಲ್ ಆಗುತ್ತದೆ. ಕೆಲವೊಮ್ಮೆ ಮದುವೆ ಇಷ್ಟವಿಲ್ಲದೆ ವರ, ವಧು ಪರಾರಿಯಾಗುವುದೂ ಇದೆ. ಮಧ್ಯಪ್ರದೇಶದಲ್ಲೂ ಇಂಥಹದ್ದೇ ವಿಭಿನ್ನ ಘಟನೆಯೊಂದು ನಡೆದಿದೆ.
ತನ್ನ ಮದುವೆಗೆ ಸಿದ್ಧವಾಗಲು ಬ್ಯೂಟಿ ಪಾರ್ಲರ್ಗೆ ಹೋಗಿದ್ದ ವಧು ಅಲ್ಲಿಂದಲೇ ಪರಾರಿಯಾಗಿದ್ದಾಳೆ. ವರ ಮಂಟಪದಲ್ಲೇ ಆಕೆಗಾಗಿ ಕಾಯುತ್ತಾ ಕುಳಿತಿದ್ದಾನೆ. ವಧುವಿಗಾಗಿ ಕಾತರದಿಂದ ಕಾಯುತ್ತಿದ್ದ ವರನ ಕಡೆಯವರು ತಾಳ್ಮೆ ಕಳೆದುಕೊಂಡು ಆಕೆ ಎಲ್ಲಿದ್ದಾಳೆ ಎಂದು ವಿಚಾರಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ ಎಂದು ವರದಿ ತಿಳಿಸಿದೆ.
ಡಿಡೋಲಿ ಕೊತ್ವಾಲಿ ಮೂಲದ ವಧುವಿನ ವಿವಾಹವು ನೌಗಾವಾನ್ ಸಾದತ್ ನಿವಾಸಿ ವರನೊಂದಿಗೆ ನಿಶ್ಚಯವಾಗಿತ್ತು. ನಿಗದಿತ ದಿನಾಂಕದಂದು ವರನು ಭವ್ಯ ಮೆರವಣಿಗೆಯಲ್ಲಿ ಮದುವೆ ಸ್ಥಳಕ್ಕೆ ಬಂದ್ದಿದ್ದನು. ಮದುವೆ ಸಮಾರಂಭಕ್ಕೆ ವೇದಿಕೆಗೆ ಕರೆತರುವಂತೆ ವರನ ಕಡೆಯವರು ವಧುವಿನ ಮನೆಯವರನ್ನು ಕೇಳಿದಾಗ, ವಧುವಿನ ಕಡೆಯವರು ಅವರು ಬ್ಯೂಟಿ ಪಾರ್ಲರ್ಗೆ ಹೋಗಿರುವುದಾಗಿ ತಿಳಿಸಿದ್ದಾರೆ.
ವಧು ಶೀಘ್ರದಲ್ಲೇ ಹಿಂತಿರುಗುತ್ತಾಳೆ ಎಂದು ವರನ ಮನೆಯವರಿಗೆ ತಿಳಿಸಲಾಯಿತು. ಆದರೆ, ಬಹಳ ಹೊತ್ತಾದರೂ ವಧು ಬಾರದಿರುವುದು ವರನ ಕಡೆಯವರಲ್ಲಿ ಅನುಮಾನ ಮೂಡಿಸಿದೆ.
ನಂತರ ವರನ ಮನೆಯವರು ಕಾದು-ಕಾದು ಪೊಲೀಸ್ ಠಾಣೆಗೆ ಬಂದು ವಧು ಮತ್ತು ಆಕೆಯ ಕುಟುಂಬದವರ ವಿರುದ್ಧ ವಂಚನೆ ಆರೋಪದಡಿ ದೂರು ದಾಖಲಿಸಿದ್ದಾರೆ.
ವರನು ವಧು ಇಲ್ಲದೆ ತನ್ನ ಮನೆಗೆ ಮರಳಿದನು. ಮತ್ತೊಂದೆಡೆ, ವಧುವಿನ ಮನೆಯವರು ನಾಪತ್ತೆ ದೂರು ದಾಖಲಿಸಿದ್ದಾರೆ. ವಧುವಿನ ಕಡೆಯವರ ದೂರಿನ ಆಧಾರದ ಮೇಲೆ ಪೊಲೀಸರು ನಾಪತ್ತೆಯಾದ ವಧುವಿನ ಕುಟುಂಬ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿ ಹುಡುಕಾಟ ಆರಂಭಿಸಿದ್ದಾರೆ ಎಂದು ವರದಿ ತಿಳಿಸಿದೆ.