ಕರಾವಳಿಕ್ರೈಂ

ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕ ಪೊಲೀಸ್‌ ಬಲೆಗೆ,ಕೃತ್ಯಕ್ಕೆ ಬಳಸಿದ ಸ್ಕೂಟರ್‌, 390 ಗ್ರಾಂ ತೂಕದ ಗಾಂಜಾ ವಶ

ನ್ಯೂಸ್‌ ನಾಟೌಟ್‌: ಉಡುಪಿ ಜಿಲ್ಲೆಯ ಮಣಿಪಾಲದ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಮೊಹಮ್ಮದ್‌ ನೂರ್‌(22) ಎಂದು ಗುರುತಿಸಲಾಗಿದೆ. ಈತ ಮಣಿಪಾಲದ ಸೋನಿಯಾ ಕ್ಲಿನಿಕ್‌ ಬಳಿ ಇರುವ ರೋಟರಿ ಕ್ಲಬ್‌ ಸಮೀಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಪೊಲೀಸರು ಕಾರ್ಯಾಚರಣೆ ನಡೆಸಿ ಈತನ ವಶದಲ್ಲಿದ್ದ 390 ಗ್ರಾಂ ತೂಕದ ಅಂದಾಜು 20 ಸಾವಿರ ರೂ.ಮೌಲ್ಯದ ಗಾಂಜಾ ಮತ್ತು ಕೃತ್ಯಕ್ಕೆ ಬಳಸಿದ ಸ್ಕೂಟರ್‌ ಸಹಿತ ಒಟ್ಟು 70,000ರೂ.ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಕೊಡಗು ಸಂಪಾಜೆ: ಅಗಲಿದ ಗಾಂಧಿಪ್ರಸಾದ್, ರತ್ನಾಕರರಿಗೆ ನುಡಿನಮನ

ಮಡಿಕೇರಿ: ಮೀನಿಗೆ ಹಾಕಿದ್ದ ಗಾಳದ ವಯರ್ ಆತನ ಕುತ್ತಿಗೆಗೆ ಸಿಲುಕಿದ್ದೇಗೆ..? ಸ್ನಾನಕ್ಕೆಂದು ನದಿಗೆ ಇಳಿದವ ಮತ್ತೆ ಬರಲೇ ಇಲ್ಲ..!

ತಾಲೂಕು ಪಂಚಾಯತ್ ಕ್ವಾಟ್ರಸ್‌ನಲ್ಲಿ ಆತ್ಮಹತ್ಯೆಗೆ ಶರಣಾದ 15 ವರ್ಷದ ಬಾಲಕ..!