ನ್ಯೂಸ್ ನಾಟೌಟ್ : ಮನೆಯಲ್ಲಿ ತಂದೆ-ತಾಯಿ ಇಬ್ಬರೂ ಕೆಲಸಕ್ಕೆ ಹೋಗೋ ಭರದಲ್ಲಿ ಮಕ್ಕಳನ್ನು ಡೇ ಕೇರ್ ಸೆಂಟರ್ ಗೆ ಸೇರಿಸೋದು ಸಾಮಾನ್ಯವಾಗಿ ಬಿಟ್ಟಿದೆ. ಅಲ್ಲಿಗೆ ನಿಮ್ಮ ಜವಾಬ್ದಾರಿ ಮುಗೀತು ಅಂತ ನೀವಂದು ಕೊಳ್ತೀರಿ.ಆದರೆ ಡೇ ಕೇರ್ ಸೆಂಟರ್ ನಲ್ಲಿ ರೆಕಾರ್ಡ್ ಆದ ಸಿಸಿ ಟಿವಿ ಫೂಟೇಜ್ ಅಲ್ಲಿನ ಸಂಪೂರ್ಣ ಚಿತ್ರಣವನ್ನು ತೆರೆದಿಟ್ಟಿದೆ.ಏನಿದು ಘಟನೆ? ಈ ಸ್ಟೋರಿ ಓದಿ ..
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಹುತೇಕ ಪೋಷಕರು, ಇಬ್ಬರೂ ಕೆಲಸ ಮಾಡುವ ದೃಷ್ಟಿಯಿಂದ ಮಕ್ಕಳನ್ನು ಡೇ ಕೇರ್ ಸೆಂಟರ್ಗೆ ಮಕ್ಕಳನ್ನು ಸೇರಿಸಿ ಕೆಲಸಕ್ಕೆ ಹೋಗುವುದು ಮಾಮೂಲಿಯಾಗಿದೆ. ಆದರೆ ಈ ದೃಶ್ಯ ನೋಡಿದ್ರೆ ನೀವು ಸ್ವಲ್ಪ ಯೋಚನೆ ಮಾಡಬೇಕಾಗುತ್ತೆ.ಎಂಥವರಿಗಾದರೂ ಕರುಳು ಚುರಕ್ ಅನ್ನದೇ ಇರೋದಿಲ್ಲ. ಇದು ಬೆಂಗಳೂರಿನ ಚಿಕ್ಕಲಸಂದ್ರದಲ್ಲಿ ಇರೋ ಟೆಂಡರ್ ಫೂಟ್ ಡೇ ಕೇರ್ ಸೆಂಟರ್ ನಲ್ಲಿ ನಡೆದಿರೋ ಘಟನೆಯಾಗಿದೆ.
ಡೇ ಕೇರ್ ಸೆಂಟರ್ ಅಲ್ಲಿ ಮಕ್ಕಳನ್ನು ನೋಡಿಕೊಳ್ತಾ ಇದ್ದ ಆಯಾ ಒಂದು ಮಗುವನ್ನು ಹೊರಗೆ ಕರೆದುಕೊಂಡು ಹೋಗ್ತಾರೆ. ಆಗ ರೂಮಿನಿಂದ ಹೊರಗೆ ಹೋಗೋದಕ್ಕೆ ಮಕ್ಕಳು ಒದ್ದಾಡ್ತಾ ಇರ್ತಾವೆ. ಈ ಸಂದರ್ಭದಲ್ಲಿ ಒಂದು ಮಗು ಇನ್ನೊಂದು ಮಗುವನ್ನು ಹಿಡಿದುಕೊಂಡು ಹೊಡೆದಿರೊ ದೃಶ್ಯ ವೈರಲ್ ಆಗುತ್ತಿದೆ. ಸುಮಾರು ಮೂರು ನಾಲ್ಕು ನಿಮಿಷ ಹೊಡೆದರೂ ಮಕ್ಕಳನ್ನ ನೋಡಿಕೊಳ್ಳಲು ಅಲ್ಲಿಗೆ ಯಾರು ಬರೋದೆ ಇಲ್ಲ. ಮಕ್ಕಳು ಹೊಡೆದಾಡಿಕೊಳ್ಳುವ ಬಗ್ಗೆ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಉಳಿದ ಮಕ್ಕಳು ಹೇಳಿದರೂ ಅದನ್ನು ಕಿವಿ ಮೇಲೆ ಹಾಕಿಕೊಳ್ಳುವುದಿಲ್ಲ. ಹೀಗಾಗಿ, ಸ್ವಲ್ಪ ದೊಡ್ಡದಾದ ಮಗು ಚಿಕ್ಕ ಮಗುವನ್ನು ಒದೆಯುವುದು, ಹೊಡೆಯುವುದು, ಕಚ್ಚುವುದು ಹಾಗೂ ನಿಂತುಕೊಳ್ಳುತ್ತಿದ್ದಂತೆ ತಳ್ಳುವ ಕಾರ್ಯವನ್ನು ಮಾಡುತ್ತಿದೆ. ಆದರೂ ಸಿಬ್ಬಂದಿ ಅಲ್ಲಿಗೆ ಬಾರದೇ ಬೇಜವಾಬ್ದಾರಿ ತೋರಿಸಿದ್ದಾರೆ. ಸಂಜೆ ವೇಳೆ ಮನೆಗೆ ಹೋದ ಮಗುವಿನ ಮೇಲೆ ಗಾಯಗಳಾಗಿರುವುದನ್ನು ಕಂಡು ಅನುಮಾನಗೊಂಡ ಪೋಷಕರು ಬಂದು ಡೇ ಕೇರ್ ಸೆಂಟರ್ನ ಸಿಸಿಟಿವಿ ಫೂಟೇಜ್ ಪರಿಶೀಲಿಸಿದ್ದಾರೆ.ಈ ವೇಳೆ ಅಲ್ಲಿ ನಡೆದಿದ್ದೇನು ಅನ್ನೋದರ ಬಗ್ಗೆ ಅರಿವಾಗಿದೆ. ನಂತರ ಪೋಷಕರು ಡೇ ಕೇರ್ ಸೆಂಟರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಡೇ ಕೇರ್ ಸೆಂಟರ್ ಮಾಲೀಕರು ಮತ್ತು ಸಿಬ್ಬಂದಿ ವಿರುದ್ಧ ಹರಿಹಾಯ್ದ ಪೋಷಕರು ಅಲ್ಲಿನ ದೃಶ್ಯಾವಳಿಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಕೇವಲ ಹಣವನ್ನು ಪಡೆದು ವಂಚನೆ ಮಾಡುತ್ತಿದ್ದು, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಪೋಷಕರು ಟ್ವಿಟರ್ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ನಗರ ಪೊಲೀಸರಿಂದ ಸೂಚನೆ ನೀಡಲಾಗಿದ್ದು, ಸೂಕ್ತ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.