ನ್ಯೂಸ್ ನಾಟೌಟ್: ರಾಜಸ್ಥಾನದ ಜೋಧಪುರದಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿದೆ. ಹಿರಿಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾದ ಪತಿಗೆ ಮೊದಲ ರಾತ್ರಿಯಂದೇ ಪತ್ನಿ ರಾಖಿ ಕಟ್ಟಿದ್ದಾಳೆ. ಇದಲ್ಲದೇ ತನ್ನನ್ನು ತನ್ನ ಮೊದಲ ಪತಿಯೊಂದಿಗೆ ಜೀವನ ನಡೆಸಲು ಬಿಡಿ ಎಂದು ಬೇಡಿಕೊಂಡಿದ್ದಾಳೆ. ಇದೀಗ ಈ ಪ್ರಕರಣ ರಾಜಸ್ಥಾನದಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲೂ ಸಂಚಲನ ಮೂಡಿಸಿದೆ.
ರಾಜಸ್ಥಾನದ ಬಲೇಸರ್ ಮೂಲದ ತರುಣಾ ಶರ್ಮಾ ಎಂಬ ಯುವತಿ ತನ್ನ ಬಾಲ್ಯದ ಗೆಳೆಯ ಸುರೇಂದ್ರ ಸಂಖ್ಲಾ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಹುಡುಗಿಯ ಮನೆಯವರು ಹುಡುಗ ಬೇರೆ ಜಾತಿ ಎಂಬ ಕಾರಣಕ್ಕೆ ಮದುವೆಗೆ ನಿರಾಕರಿಸಿದ್ದಾರೆ. ಇದಾದ ಕೆಲವೇ ದಿನಗಳ ಬಳಿಕ ತರುಣಾ ಮನೆಯವರು ಆಕೆಯ ಗಂಡನಿಂದ ಬೇರ್ಪಡಿಸಿ, ಛತ್ತೀಸ್ಗಢದ ಜಿತೇಂದ್ರ ಜೋಶಿ ಎಂಬಾತನೊಂದಿಗೆ ಎರಡನೇ ಮದುವೆ ಮಾಡಿಸಿದ್ದಾರೆ. ಬಲವಂತವಾಗಿ ಮದುವೆ ಮಾಡಿಸಿರುವುದರಿಂದ ಮೊದಲ ರಾತ್ರಿಯಂದೇ ತನ್ನ ಎರಡನೇ ಪತಿಯ ಕೈಗೆ ರಾಖಿ ಕಟ್ಟಿ ತನ್ನ ಮೊದಲ ಪತಿಯೊಂದಿಗೆ ಕಳುಹಿಸುವಂತೆ ಬೇಡಿಕೊಂಡಿದ್ದಾಳೆ ಎಂದು ಜೂನ್ ೧೩ರಂದು ವರದಿಯಾಗಿದೆ.
ಇದನ್ನೂ ಓದಿ: ಶೀಘ್ರವೇ ಖ್ಯಾತ ನಟ ರಾಜ್ ಬಿ ಶೆಟ್ಟಿಯ ಹೊಸ ಸಿನಿಮಾ ತೆರೆಗೆ! ಕುತೂಹಲ ಹೆಚ್ಚಿಸಿದ ಆ್ಯಕ್ಷನ್ ಸಿನಿಮಾ ಯಾವುದು ಗೊತ್ತಾ?
ಆದರೆ, ಇದನ್ನು ಲೆಕ್ಕಿಸದೆ ಜಿತೇಂದ್ರ(ಎರಡನೇ ಪತಿ) ಆಕೆಗೆ ಕಿರುಕುಳ ನೀಡಿದ್ದಾನೆ. ಮೊದಲ ಪತಿಯೊಂದಿಗೆ ಬಾಳಲು ಆರೋಗ್ಯ ಸರಿಯಿಲ್ಲ ಎಂಬ ನೆಪ ಒಡ್ಡಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅಲ್ಲಿ ಇತರರಿಂದ ಮೊಬೈಲ್ ಪಡೆದು ತನ್ನ ಮೊದಲ ಪತಿಗೆ ಮಾಹಿತಿ ನೀಡಿದ್ದಾಳೆ. ಅಷ್ಟೇ ಅಲ್ಲ.. ತನ್ನ ಸಂಕಷ್ಟವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.
ಜೊತೆಗೆ ಬಾಲಿವುಡ್ ಸ್ಟಾರ್ ನಟ ಸೋನುಸೂದ್ ಅವರನ್ನು ಟ್ಯಾಗ್ ಮಾಡಿದ್ದಾಳೆ. ಈ ಘಟನೆ ಎಲ್ಲೆಡೆ ಭಾರೀ ವೈರಲ್ ಆಗಿದೆ. ಸದ್ಯ ಮಹಿಳೆಯ ಆರೋಪದ ಮೇರೆಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಮಹಿಳೆಯನ್ನು ಸಖಿ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.