ನ್ಯೂಸ್ ನಾಟೌಟ್ : ಕಾರಿನಲ್ಲಿ ಬಂದ ದರೋಡೆಕೋರರ ತಂಡ ಟ್ಯಾಂಕರ್ ಚಾಲಕನಿಗೆ ಹಲ್ಲೆ ನಡೆಸಿ ಚಾಲಕನಿಂದ ನಗದು ಸಹಿತ ದಾಖಲೆ ಪತ್ರಗಳನ್ನು ದೋಚಿದ ಘಟನೆ ಶುಕ್ರವಾರ ತಡ ರಾತ್ರಿ ಸಂಭವಿಸಿದೆ.ಉಪ್ಪಿನಂಗಡಿ ಬಳಿಯ ಶಿರಾಡಿ ಗ್ರಾಮದ ಗಡಿ ದೇವಸ್ಥಾನದ ಸಮೀಪ ಈ ಘಟನೆ ನಡೆದಿದೆ. ಸುರತ್ಕಲ್ ಕಡಂಬೋಡಿ ಮನೆ ನಿವಾಸಿ, ಟ್ಯಾಂಕರ್ ಚಾಲಕ ಆಸ್ಕರ್ ವಿನ್ಸೆಂಟ್ ಸೋನ್ಸ್ (61) ಹಲ್ಲೆಗೊಳಗಾದವರು.
ಮಂಗಳೂರಿನ ಕೂಳೂರಿನಿಂದ ಡಾಮರ್ ತುಂಬಿದ ಟ್ಯಾಂಕರನ್ನು ಸಹಾಯಕ ತೌಷಿಪ್ನೊಂದಿಗೆ ಚಲಾಯಿಸಿಕೊಂಡು ಹೋಗುತ್ತಿದ್ದರು. ಈ ವೇಳೆ ವೇಳೆ ಖಾಸಗಿ ಬಸ್ಸೊಂದರಿಂದ ಇಳಿದ ವ್ಯಕ್ತಿಯೊಬ್ಬ ಟ್ಯಾಂಕರ್ ನಿಲ್ಲಿಸಲು ಸೂಚಿಸಿದ್ದಾನೆ. ನಿಲ್ಲಿಸಲು ನಿರಾಕರಿಸಿದಾಗ ಫಾರ್ಚೂನರ್ ಕಾರೊಂದನ್ನು ಅದರ ಚಾಲಕ ನಮ್ಮ ಟ್ಯಾಂಕರ್ಗೆ ಅಡ್ಡವಾಗಿ ನಿಲ್ಲಿಸಿದ. ಆಗ ಕಾರಿನಲ್ಲಿದ್ದ ಮೂವರು ಬಂದು ಟ್ಯಾಂಕರ್ ಕ್ಯಾಬಿನ್ ಒಳಗೆ ಪ್ರವೇಶಿಸಿ ನನ್ನಲ್ಲಿದ್ದ 6000 ರು. ಹಣ ಇದ್ದ ಪರ್ಸನ್ನು ಎಗರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗದೆ.ವಾಹನ ಚಾಲನಾ ಪರವಾನಗಿ ಸಹಿತ ಟ್ಯಾಂಕರ್ ದಾಖಲೆಗಳನ್ನು , ಬಿಲ್ಗಳನ್ನು ಕಿತ್ತುಕೊಂಡಿದ್ದಲ್ಲದೆ, ನನ್ನನ್ನು ಟ್ಯಾಂಕರ್ನಿಂದ ಕೆಳಗೆ ಎಳೆದು ಹಲ್ಲೆ ನಡೆಸಿದ್ದಾರೆಂದು ಆಸ್ಕರ್ ವಿನ್ಸೆಂಟ್ ಸೋನ್ಸ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಉಪ್ಪಿನಂಗಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಸ್ಕರ್ ವಿನ್ಸೆಂಟ್ ಸೋನ್ಸ್ ಅವರಿಗೆ ಹಲ್ಲೆಯಿಂದ ಕೈ, ಬಾಯಿ ಹಾಗೂ ಕಣ್ಣಿಗೆ ಏಟಾಗಿದ್ದು, ಎಂದು ತಿಳಿದು ಬಂದಿದೆ.