ನ್ಯೂಸ್ ನಾಟೌಟ್ : ಮದುವೆ ಹೆಣ್ಣನ್ನು ಆಕೆ ಕುಟುಂಬಸ್ಥರೇ ಬೈಕ್ ನಲ್ಲಿ ಹೊತ್ತಯ್ದ ಭಯಾನಕ ಘಟನೆ ನಡೆದಿದೆ.ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ವಿರೋಧದ ನಡುವೆಯೂ ಪ್ರೀತಿಸಿ ಅಂತರ್ಜಾತಿ ವಿವಾಹವಾದ ಹಿನ್ನೆಲೆ ಈ ಘಟನೆ ನಡೆದಿದೆ ಎದು ಮೇಲ್ನೊಟಕ್ಕೆ ಕಂಡು ಬಂದಿದೆ.ಬಿಹಾರದ ಬತ್ನಾಹಾ ಒಪಿ ಪ್ರದೇಶದ ಗ್ರಾಮವೊಂದರಲ್ಲಿ ಜೂನ್ 3ರಂದು ಈ ಘಟನೆ ನಡೆದಿದೆ. ಟೆಂಟ್ ವ್ಯಾಪಾರ ಮಾಡುತ್ತಿರುವ 22 ವರ್ಷದ ಯುವಕ ಹಾಗೂ ಯುವತಿ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇದು ಯುವತಿಯ ಮನೆಯವರಿಗೆ ತಿಳಿದು, ಎರಡೂ ಕುಟುಂಬಗಳ ನಡುವೆ ಹಿರಿಯರ ಸಮ್ಮುಖದಲ್ಲಿ ಈ ಹಿಂದೆ ಪಂಚಾಯತಿ ನಡೆದಿದೆ. ಇದೆಲ್ಲದರ ಹೊರತಾಗಿ ಯುವಕ ಹಾಗೂ ಯುವತಿ ಸುಪೌಲ್ ನ್ಯಾಯಾಲಯದಲ್ಲಿ ವಿವಾಹವಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರೇಮ ವಿವಾಹವಾದ ವಿಚಾರ ತಿಳಿದು ಕೋಪಗೊಂಡ ಯುವತಿ ಕುಟುಂಬಸ್ಥರು ಆಕೆಯನ್ನು ಬೈಕ್ನಲ್ಲಿ ಎತ್ತಿಕೊಂಡು ಓಡಿ ಹೋಗುತ್ತಿರುವ ವಿಡಿಯೋ, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದಾಗ ಯಾವುದೋ ಸಿನಿಮಾ ದೃಶ್ಯವನ್ನು ನೋಡುತ್ತಿದ್ದೆವೆನೋ ಎಂದು ಭಾಸವಾಗುತ್ತದೆ. ಸದ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಯುವತಿಯನ್ನು ರಕ್ಷಿಸಿದ್ದು, ತಪ್ಪಿತಸ್ಥರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಯುವಕನ ತಂದೆಗೂ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಯುವತಿಯ ಕಡೆಯವರು ನನಗೆ ದೊಣ್ಣೆಯಿಂದ ಹೊಡೆದು ಎಡಗೈ ಮುರಿದಿದ್ದು, ಬಾಯಿಯಿಂದ ರಕ್ತ ಬಂದಿದೆ. ಕೊನೆಯಲ್ಲಿ ಪ್ರಾಣ ಹೋಗಿದೆ ಎಂದು ಭಾವಿಸಿ ನನ್ನನ್ನು ರಸ್ತೆ ಬದಿ ಎಸೆದಿದ್ದಾರೆ. ಗಂಭೀರ ಗಾಯಗೊಂಡ ನನ್ನನ್ನು ನೋಡಿ ಅಪರಿಚಿತರು ಸಂಬಂಧಿಕರಿಗೆ ಮಾಹಿತಿ ನೀಡಿದ್ದು, ನಂತರ ಆಸ್ಪತ್ರೆಗೆ ದಾಖಲಾದೆ ಎಂದು ಯುವಕನ ತಂದೆ ಹೇಳಿಕೊಂಡಿರುವುದು ವರದಿಯಾಗಿದೆ.