ನ್ಯೂಸ್ ನಾಟೌಟ್: ಪುತ್ತೂರು ಶಾಸಕರ ವಿರುದ್ಧ ನಿಂದನಾತ್ಮಕ ಪೋಸ್ಟ್ ಹಾಕಿದ ಹಿನ್ನಲೆಯಲ್ಲಿ ಶಾಸಕರ ಅಭಿಮಾನಿಗಳು ಮನೆಗೆ ತೆರಳಿ ಗದ್ದಲ ಸೃಷ್ಟಿಸಿದ ಸುಳ್ಯ ಜಯನಗರ ನಿವಾಸಿ ಪ್ರಮೀತ್ ರಾವ್ ರವರ ಮನೆಗೆ ಪುತ್ತಿಲ ಪರಿವಾರದ ಪ್ರಮುಖರು ಭೇಟಿ ನೀಡಿ ಧೈರ್ಯ ತುಂಬಿದರು.
ಸುಳ್ಯ ಜಯನಗರ ನಿವಾಸಿ ಪ್ರಮೀತ್ ಎಂಬ ಯುವಕ ತನ್ನ ಫೇಸ್ಬುಕ್ ಖಾತೆಯಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಯವರ ಕುರಿತು ಕೀಳುಮಟ್ಟದ ಬರಹವನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ಶಾಸಕರ ಅಭಿಮಾನಿ ಬಳಗವೊಂದು ಪ್ರಮೀತ್ ಎಂಬ ಯುವಕನ ಮನೆಗೆ ತೆರಳಿತ್ತು. ಮೇ.24 ರಂದು ತಡರಾತ್ರಿ ಪುತ್ತೂರಿನಿಂದ ಶಾಸಕರ ಅಭಿಮಾನಿ ಬಳಗ ಪ್ರಮೀತ್ ಮನೆಗೆ ತೆರಳಿ ಫೇಸ್ಬುಕ್ ಪೋಸ್ಟ್ ನ್ನು ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದಾರೆ.ಸುಮಾರು 15ಕ್ಕೂ ಹೆಚ್ಚು ಯುವಕರ ತಂಡ ಸುಳ್ಯದ ಜಯನಗರದಲ್ಲಿರುವ ಪ್ರಮೀತ್ ರವರ ನಿವಾಸಕ್ಕೆ ತೆರಳಿ ಫೇಸ್ಬುಕ್ ನಿಂದ ಬರೆದ ಪೋಸ್ಟನ್ನು ಡಿಲೀಟ್ ಮಾಡುವಂತೆ ಮತ್ತು ಶಾಸಕರ ಬಳಿ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ.ಇದಕ್ಕೆ ಯುವಕ ಒಪ್ಪದಿದ್ದಾಗ ಮಾತಿನ ಚಕಮಕಿಯೂ ನಡೆದಿತ್ತು.
ಘಟನಾ ಸ್ಥಳಕ್ಕೆ ನೂರಾರು ಮಂದಿ ಸ್ಥಳೀಯರು ಜಮಾಯಿಸಿದ್ದು,ವಿಷಯ ತಿಳಿದು ಸುಳ್ಯ ಪೊಲೀಸರು ಸ್ಥಳಕ್ಕಾಗಮಿಸಿದ್ದರು.ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹರಸಾಹಸ ಪಟ್ಟಿದ್ದರು.ಬಳಿಕ ಯುವಕ ಹಾಗೂ ಪುತ್ತೂರಿನಿಂದ ಬಂದಿದ್ದ ಶಾಸಕರ ಅಭಿಮಾನಿ ಬಳಗದವರನ್ನು ವಿಚಾರಣೆಗೆಂದು ಸುಳ್ಯ ಠಾಣೆಗೆ ಕರೆದೊಯ್ದಿದ್ದರು. ಸುಳ್ಯ ಠಾಣೆಗೆ ಕರೆದುಕೊಂಡು ಹೋಗಿ ಮಾತುಕತೆ ನಡೆಸಿ,ಇದಾದ ಬಳಿಕ ಪ್ರವೀತ್ ಈ ಘಟನೆ ಸಂಬಂಧಿಸಿ ಕ್ಷಮೆಯನ್ನು ಕೇಳಿದ್ದ. ಬಳಿಕ ಪ್ರಕರಣ ರಾಜಿಯಲ್ಲಿ ಇತ್ಯರ್ಥಪಡಿಸಲಾಗಿತ್ತು.