ಕರಾವಳಿ

ಪುತ್ತೂರು : ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ, ರಾಜ್ಯ ಮಾನವ ಹಕ್ಕು ಆಯೋಗದಿಂದ ದೂರು ದಾಖಲು

ನ್ಯೂಸ್ ನಾಟೌಟ್: ಪುತ್ತೂರಿನಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲದ ವ್ಯಕ್ತಿಯೊಬ್ಬರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.

ಉಳ್ಳಾಲದ ತೊಕ್ಕಟ್ಟು ಕೃಷ್ಣನಗರ ನಿವಾಸಿ ಅಜಿತ್ ಕುಮಾರ್ ಮೇ 16 ರಂದು ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ. ದೂರಿನ ಪ್ರಕಾರ ಮೇ 16 ಹಿಂದೂ ಕಾರ್ಯಕರ್ತರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಯುವಕರ ಮೇಲೆ ಹಿಂಸಾತ್ಮಕ ಕೃತ್ಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂಸಾತ್ಮಕ ಕೃತ್ಯ ಎಸಗಿದ ಪೊಲೀಸರು ಮತ್ತು ಅವರಿಗೆ ಸಹಾಯ ಮಾಡಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Related posts

ಶಾರಿಖ್‌ ಕುಕ್ಕರ್‌ನಲ್ಲಿದ್ದದ್ದು ಅಂತಿಂಥ ಬಾಂಬ್ ಅಲ್ಲ..!

ಪುತ್ತೂರು: SSLC ಮುಗಿಸಿ PUC ಓದುವ ಕನಸು ಕಾಣುತ್ತಿದ್ದ ವಿದ್ಯಾರ್ಥಿನಿ ಹಠಾತ್ ಸಾವು

ಅಮರ ಪಬ್ಲಿಕ್ ಚಾರಿಟೇಬಲ್ ಟ್ರೆಸ್ಟ್‌ಗೆ ದೇಣಿಗೆ ಹಸ್ತಾಂತರ