ನ್ಯೂಸ್ ನಾಟೌಟ್: ಪ್ರತಿಯೊಬ್ಬರು ಕೂಡ ತಮ್ಮ ಕುಟುಂಬದವರ, ಮಕ್ಕಳ ಭವಿಷ್ಯದ ಕಡೆ ಗಮನ ಹರಿಸುತ್ತಾರೆ. ದುಡಿದ ಹಣವನ್ನು ಯಾವ ಬ್ಯಾಂಕ್‌ನಲ್ಲಿ ಠೇವಣಿ ಇಡುವುದು ಎಂದು ಯೋಚಿಸುತ್ತಾರೆ. ಆದರೆ ಇನ್ನು ಮುಂದೆ ಈ ಬಗ್ಗೆ ಸಂಪಾಜೆಯ ಕಲ್ಲುಗುಂಡಿಯಲ್ಲಿರುವ ಶ್ರೀ ಅಮ್ಮನ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ (ನಿ) ವಿಶೇಷ ಠೇವಣಿ ಸಂಗ್ರಹ ಮತ್ತು ಸಾಲ ಸೌಲಭ್ಯ ಪರಿಚಯಿಸುತ್ತಿದ್ದು ಗ್ರಾಹಕರ ಮನದ ಇಚ್ಛೆಯಂತೆ ಕಾರ್ಯನಿರ್ವಹಿಸಲಿದೆ.
ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ 600ಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಗ್ರಾಮೀಣ ಭಾಗದ ಜನತೆಗೆ ಸುಲಭ ವಿಧಾನದಲ್ಲಿ ಸಾಲ ಸೌಲಭ್ಯ ಮತ್ತು ಠೇವಣಿಗಳಿಗೆ ಅವಕಾಶವಿದೆ. ಬ್ಯಾಂಕಿನ ಎಲ್ಲಾ ವ್ಯವಹಾರಗಳು ಬ್ಯಾಂಕಿಂಗ್ ಸಾಪ್ಟ್‌ವೇರ್ ಮೂಲಕ ನಡೆಯುತ್ತದೆ. ಸದಸ್ಯರ, ಗ್ರಾಹಕರ ಪಿಗ್ನಿ ಖಾತೆಗಳು, ನಿರಖು ಠೇವಣಿಗಳು , ಮಾಸಿಕ ಖಾತೆಗಳು , ಶ್ರೀ ಅಮ್ಮನ್ ಪಿಗ್ನಿ ಸಾಲ , ಶ್ರೀ ಅಮ್ಮನ್ ಷೇರು ನಗದು ಪತ್ರ , ಕಂಪ್ಯೂಟರೀಕರಣಗೊಂಡು ನಿಖರವಾಗಿ, ಪಾರದರ್ಶಕವಾಗಿ ಭದ್ರತೆಯೊಂದಿಗೆ ಬ್ಯಾಂಕ್ ತನ್ನ ಕಾರ್ಯ ನಿರ್ವಹಿಸುತ್ತಿದೆ. ಪ್ರತೀ ಗ್ರಾಹಕರ ಠೇವಣಿಗಳಿಗೆ ಶೇ. 8.60 ಬಡ್ಡಿದರ ನೀಡಲಾಗುತ್ತದೆ. ವಿಶೇಷವಾಗಿ ಹಿರಿಯ ನಾಗರಿಕ, ಮಹಿಳೆಯರು, ಸೈನಿಕರು ಮತ್ತು ಮಾಜಿ ಸೈನಿಕರ ಠೇವಣಿಗಳಿಗೆ ಶೇ.0.50ರಷ್ಟು ಹೆಚ್ಚುವರಿ ಬಡ್ಡಿ ನೀಡಲಾಗುವುದು. ಅದಲ್ಲದೇ ಯಾವುದೇ ಸಾಲ ಪಡೆದರೂ ಕಡಿಮೆ ಬಡ್ಡಿದರದಲ್ಲಿ ಹಾಗೂ ತ್ವರಿತವಾಗಿ ಕ್ಲಪ್ತ ಸಮಯದಲ್ಲಿ ನೀಡಲಾಗುವುದು. ಅಲ್ಲದೆ ಯಶಸ್ವಿನಿ ಕಾರ್ಡ್ ಮತ್ತು ಪಾನ್ ಕಾರ್ಡ್ ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.