ನ್ಯೂಸ್ ನಾಟೌಟ್ : ಇಡೀ ದೇಶವನ್ನೇ ಬೆಚ್ಚಿ ಬೀಳಿಸುವಂತೆ ಮಾಡುವ ಘಟನೆಯೊಂದು ಗುವಾಹಟಿಯಲ್ಲಿ ನಡೆದಿದ್ದು,ಏನೂ ಅರಿಯದ ಇಬ್ಬರು ಅವಳಿ ಸಹೋದರಿಯರನ್ನು ಮನೆಯಲ್ಲಿರಿಸಿದಲ್ಲದೇ ಅವರಿಗೆ ಕಿರುಕುಳ ನೀಡಿರುವ ಘಟನೆ ಬಯಲಿಗೂ ಬಂದಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆವೈದ್ಯ ದಂಪತಿಯನ್ನು ಪೊಲೀಸರು ಬಂಧಿಸಿರುವ ಬಗ್ಗೆ ವರದಿಯಾಗಿದೆ.
ಡಾ. ವಲಿಯುಲ್ ಮತ್ತು ಮನೋವೈದ್ಯೆ ಡಾ. ಸಂಗೀತಾ ದತ್ತಾ ಹಾಗೂ ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿನಾಥ್ ಬಂಧಿತರಾಗಿದ್ದಾರೆ.ವೈದ್ಯ ದಂಪತಿಗಳು ರೋಮಾ ಎನ್ಕ್ಲೇವ್ನ ನಾಲ್ಕನೇ ಮಹಡಿಯಲ್ಲಿ ಅಪ್ರಾಪ್ತ ಬಾಲಕಿಯರನ್ನು ಬಂಧಿಯಾಗಿರಿಸಿದ್ದರು ಎನ್ನಲಾಗಿದೆ.ಬಾಲಕಿಯರಿಗೆ 3 ವರ್ಷ ಪ್ರಾಯವಾಗಿದ್ದು, ಅವರ ಖಾಸಗಿ ಭಾಗಗಳಲ್ಲಿ ಸುಟ್ಟ ಗಾಯಗಳು ಪತ್ತೆಯಾಗಿದ್ದವು.ಮಾತ್ರವಲ್ಲ ದೇಹದ ಹಲವು ಭಾಗಗಳಲ್ಲಿ ಗಾಯಗಳಾಗಿವೆಂದು ಆರೋಗ್ಯ ಪರೀಕ್ಷಿಸುವ ವೇಳೆ ತಿಳಿದು ಬಂದಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಸ್ಪೋಟಕ ವಿಷಯ ಬಹಿರಂಗಗೊಂಡಿದ್ದು,ಮಕ್ಕಳ ಖಾಸಗಿ ಭಾಗಗಳನ್ನು ಸಿಗರೇಟಿನಿಂದ ಸುಟ್ಟಿರುವುದು ಕಂಡುಬಂದಿದೆ ಎಂದು ಗುವಾಹಟಿ ಪೊಲೀಸ್ ಕಮಿಷನರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಪೊಲೀಸರು ಅವಳಿ ಸಹೋದರಿಯರ ಪೋಷಕರನ್ನು ನಾವು ಹುಡುಕುತ್ತಿದ್ದೇವೆ. ಪುಟ್ಟ ಮಕ್ಕಳಿಗೆ ಈ ರೀತಿ ಹಿಂಸೆ ನೀಡಿದ್ದು ಯಾಕೆ ಎನ್ನುವುದರ ಬಗ್ಗೆಯೂ ನಾವು ತನಿಖೆ ಮುಂದುವರಿಸಿದ್ದೇವೆ ಎಂದಿದ್ದಾರೆ.ವೈದ್ಯರ ಮನೆಯ ಸಹಾಯಕಿ ಲಕ್ಷ್ಮಿನಾಥ್ ಸೇರಿದಂತೆ ಎಲ್ಲಾ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು ಭಾನುವಾರ ಗುವಾಹಟಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.ದಂಪತಿಯನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಮತ್ತು ಸಹಾಯಕಿ ಲಕ್ಷ್ಮಿನಾಥ್ ರನ್ನು ಏಳು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಪೋಕ್ಸೋ ಕಾಯ್ದೆ ಅಡಿಯಲ್ಲಿ ದಂಪತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಈ ವೇಳೆ ಮಾಹಿತಿ ತೆರೆದಿಟ್ಟಿದ್ದಾರೆ.
ಮಕ್ಕಳ ಹಕ್ಕುಗಳ ಕಾರ್ಯಕರ್ತರೋರ್ವರಿಗೆ ವೈದ್ಯ ದಂಪತಿಯ ಮನೆಯಲ್ಲಿ ಇಬ್ಬರು ಮಕ್ಕಳು ಟೆರೇಸ್ನಲ್ಲಿ ಬಿಸಿಲಿನ ಶಾಖದಲ್ಲಿ ಕಂಬಕ್ಕೆ ಕಟ್ಟಿರುವುದನ್ನು ಕೆಲವರು ಹೇಳಿದ್ದಾರೆ. ಇದೇ ವಿಚಾರವನ್ನು ಮಕ್ಕಳ ಹಕ್ಕುಗಳ ಕಾರ್ಯಕರ್ತ ಮಿಗುಯೆಲ್ ದಾಸ್ ಪೊಲೀಸರಿಗೆ ಈ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ವೈದ್ಯ ದಂಪತಿ ಮನೆಗೆ ದಾಳಿ ನಡೆಸಿದಾಗ ವಿಚಾರ ಬೆಳಕಿಗೆ ಬಂತು.ಇದೀಗ ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.
ಅಮ್ಮನ ಬಳಿ ತೊದಲು ಮಾತಾಡಬೇಕಿದ್ದ ಇಬ್ಬರು ಪುಟ್ಟ ಬಾಲಕಿಯರು ಈ ಕ್ರೂರ ದಂಪತಿ ಮನೆಗೆ ಯಾಕೆ ಬಂದಿದಿದ್ದಾರೆ ಎನ್ನುವುದೇ ಪ್ರಶ್ನಾರ್ಥಕವಾಗಿದೆ.ಅಷ್ಟಕ್ಕೂ ಈ ಪುಟ್ಟ ಮಕ್ಕಳ ಖಾಸಗಿ ಭಾಗಗಳನ್ನು ಸೀಗರೇಟ್ ನಿಂದ ಸುಟ್ಟು ಹಾಕುವಷ್ಟು ಅವರು ಮಾಡಿರುವ ತಪ್ಪಾದರೂ ಏನು?ಈ ವಿಚಾರ ಕೇಳಿದ್ರೆ ಕಲ್ಲು ಹೃದಯವೂ ಕರಗಿ ಹೋಗುತ್ತೆ.ಆ ದಂಪತಿ ಮನಸ್ಥಿತಿ ಯಾವ ಮಟ್ಟದಲ್ಲಿರಬೇಡ ಎನ್ನುವ ಬಗ್ಗೆ ಯೋಚನೆ ಸಾಮಾನ್ಯ ವ್ಯಕ್ತಿಯಲ್ಲೂ ಬಂದು ಬಿಡುತ್ತದೆ.