ನ್ಯೂಸ್ ನಾಟೌಟ್ : ಮೂರು ಲಕ್ಷ ರೂಪಾಯಿಗೆ ತನ್ನ ನವಜಾತ ಶಿಶುವನ್ನು ತಿರುವನಂತಪುರಂ ದಂಪತಿಗಳಿಗೆ ಮಾರಾಟ ಮಾಡಿದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಕೇರಳ ಪೊಲೀಸರು ಸೋಮವಾರ ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಶಿಶು ಮಾರಾಟದ ಬಗ್ಗೆ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ನೀಡಿದ ಮಾಹಿತಿಯನ್ನು ಆಧರಿಸಿ, ಕೆರಳದ ತಂಪನೂರ್ ಠಾಣೆ ಪೊಲೀಸರು ಶಿಶುವಿನ ತಾಯಿಯನ್ನು ಬಂಧಿಸಿದ್ದಾರೆ. ಈ ಘಟನೆಯು ಎಪ್ರಿಲ್ 21 ರಂದು ಬೆಳಕಿಗೆ ಬಂದಿದೆಯಾದರೂ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ.
ಕಾಂಜೀರಾಂಕುಲಂನಿಂದ 36 ವರ್ಷದ ಮಹಿಳೆಯನ್ನು ರವಿವಾರ ಬಂಧಿಸಲಾಗಿದ್ದು, ಶಿಶು ಜನಿಸಿದ ನಾಲ್ಕು ದಿನದ ನಂತರ ಮಹಿಳೆಯು ಕೆರಳದ ದಂಪತಿಗಳಿಗೆ ಮೂರು ಲಕ್ಷ ರೂಪಾಯಿಗೆ ತನ್ನ ಶಿಶುವನ್ನು ಮಾರಾಟ ಮಾಡಿದ್ದಳು ಎನ್ನಲಾಗಿದೆ.
ಮಕ್ಕಳ ಸುರಕ್ಷತೆಯ ಹೊಣೆಯು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯದ್ದಾಗಿದೆ ಮತ್ತು ಶಿಶುವು ಎಪ್ರಿಲ್ ಮೊದಲ ವಾರದಲ್ಲಿ ಜನಿಸಿತ್ತು ಎಂದು ಮಕ್ಕಳ ಕಲ್ಯಾಣ ಸಮಿತಿ ತಿಳಿಸಿದೆ.