ನ್ಯೂಸ್ನಾಟೌಟ್: ಲಕ್ನೋದ ಸದರ್ ಪ್ರದೇಶದಲ್ಲಿ ಹೆಡ್ ಕಾನ್ಸ್ಟೆಬಲ್ ಒಬ್ಬ ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿ ಅವಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಉತ್ತರ ಪ್ರದೇಶ ಪೊಲೀಸರು ವಿಡಿಯೋ ವೈರಲ್ ಆದ ಬಳಿಕ ಆತನನ್ನು ಅಮಾನತುಗೊಳಿಸಿದ್ದಾರೆ ಎಂದು ಗುರುವಾರ ವರದಿ ತಿಳಿಸಿದೆ.
ಆರೋಪಿ ಪೊಲೀಸ್ ಶಾಹದತ್ ಅಲಿ ಶಾಲಾ ವಿದ್ಯಾರ್ಥಿನಿಯೊಬ್ಬಳನ್ನು ಹಿಂಬಾಲಿಸಿ ಕಿರುಕುಳ ನೀಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಬಳಿಕ ಬಾಲಕಿಯ ಪೋಷಕರು ಪ್ರಕರಣ ದಾಖಲಿಸಿದ್ದಾರೆ.
ಟ್ವಿಟರ್ ವಿಡಿಯೋದಲ್ಲಿ ಶಹದತ್ ಅಲಿ, ಖಾಕಿ ಸಮವಸ್ತ್ರವನ್ನು ಧರಿಸಿ ಮತ್ತು ದ್ವಿಚಕ್ರ ವಾಹನದಲ್ಲಿ ಸೈಕಲ್ನಲ್ಲಿ ಶಾಲಾ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದು. ಹಿಂದಿನಿಂದ ವಾಹನದಲ್ಲಿ ಬರುತ್ತಿದ್ದ ಮಹಿಳೆ ಮತ್ತು ವಿಡಿಯೋ ಮಾಡಿದ ವ್ಯಕ್ತಿ ಆತನನ್ನು ಹಿಂಬಾಲಿಸಿದ್ದಾರೆ. ಮಹಿಳೆ ಪೊಲೀಸ್ ಅಧಿಕಾರಿಯನ್ನು ಎದುರಿಸಿ ಅವರ ವಾಹನದ ಸಂಖ್ಯೆಯನ್ನು ಕೇಳಿದ್ದಾರೆ, ಅದಕ್ಕೆ ಅವರು ಇದು ಎಲೆಕ್ಟ್ರಿಕ್ ವಾಹನ ಮತ್ತು ನಂಬರ್ ಹೊಂದಿಲ್ಲ ಎಂದು ಉತ್ತರಿಸಿದ್ದಾರೆ. ಈ ಪ್ರದೇಶದಲ್ಲಿ ಪ್ರತಿದಿನ ಹುಡುಗಿಯರನ್ನು ಹಿಂಬಾಲಿಸುತ್ತಾರೆ ಎಂದು ವಿಡಿಯೋದಲ್ಲಿ ಆ ಮಹಿಳೆ ಆರೋಪಿಸಿದ್ದಾರೆ.
ಲಕ್ನೋದ ಡಿಸಿಪಿ ಸೆಂಟ್ರಲ್ನ ಅಪರ್ಣಾ ಕೌಶಿಕ್, “ಶೀಘ್ರ ಕ್ರಮ ಕೈಗೊಂಡು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತುಗೊಳಿಸಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ’’ ಎಂದು ತಿಳಿಸಿದ್ದಾರೆ.