ನ್ಯೂಸ್ ನಾಟೌಟ್ : ಹೊರ ಜಗತ್ತಿಗೆ ಚೀನಾದಿಂದ ಕೊರೊನಾ ಸೋಂಕಿನ ಬಗ್ಗೆ ಮೊದಲು ಮಾಹಿತಿ ನೀಡಿದ್ದ ಫಾಂಗ್ ಬಿನ್ ಎಂಬಾತ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಬುಧವಾರ ಬಿಡುಗಡೆಯಾಗಿದ್ದಾರೆ.
2019ರ ಆರಂಭದಲ್ಲಿ ವುಹಾನ್ನಲ್ಲಿ ಸೋಂಕು ಉಂಟಾಗಿರುವ ಬಗ್ಗೆ ದಾಖಲೆಗಳನ್ನು ಸೃಷ್ಟಿಸಿ ಬಿಡುಗಡೆ ಮಾಡಿದ್ದರು, ಇದರ ಬಗ್ಗೆ ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ಅವರು ಈ ಬಗೆಗಿನ ವೀಡಿಯೋಗಳನ್ನು ಅಪ್ಲೋಡ್ ಮಾಡಿದ್ದನ್ನು ಚೈನಾ ಸರ್ಕಾರ ತೀವ್ರವಾಗಿ ವಿರೋಧಿಸಿತ್ತು.
2020ರ ಫೆಬ್ರವರಿಯ ಬಳಿಕ ಅವರು ನಾಪತ್ತೆಯಾಗಿದ್ದರು. ಆಸ್ಪತ್ರೆ ಸಿಬಂದಿ ಜತೆಗೆ ಜಗಳ ಮಾಡಿದ್ದಾರೆ ಎಂಬ ಆರೋಪ ಹೊರಿಸಿ ಅವರನ್ನು ಚೀನ ಸರಕಾರ ಜೈಲಿಗೆ ತಳ್ಳಿತ್ತು.
ಕೊರೊನಾ ಬಗ್ಗೆ ಮಾಹಿತಿ ಮತ್ತು ವೀಡಿಯೋ ಹಂಚಿಕೊಂಡಿದ್ದ ಚಿನ್ ಕ್ವಿಶಿ ಮತ್ತು ಲಿ ಝೆಹುವಾ ಎಂಬ ಇಬ್ಬರನ್ನು ಬಂಧಿಸಲಾಗಿತ್ತಾದರೂ, ಅಲ್ಪಾವಧಿಯಲ್ಲಿಯೇ ಅವರನ್ನು ಬಿಡುಗಡೆ ಮಾಡಲಾಗಿತ್ತು. ಆದರೆ ಇವರನ್ನು ಮೂರು ವರ್ಷಗಳ ನಂತರ ಬಿಡುಗಡೆ ಮಾಡಿದೆ.