ನ್ಯೂಸ್ ನಾಟೌಟ್: ಅಂಕೋಲಾಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಅರುಣ್ ಎಂಬಾತ ತಾನು ಈ ಹಿಂದೆ ಮೋದಿ ಅಭಿಮಾನದಿಂದ ಮಾಡಿದ್ದ ಹುಚ್ಚು ಅಭಿಮಾನದ ಬಗ್ಗೆ ಹಂಚಿಕೊಂಡಿದ್ದು, ಪ್ರಧಾನಿ ಮೋದಿಯವರನ್ನು ಭೇಟಿಯಾಗುವ ಆಸೆ ವ್ಯಕ್ತಪಡಿಸಿದ್ದಾರೆ.
ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಗೆದ್ದು ಮತ್ತೆ ಪ್ರಧಾನಿಯಾಗಬೇಕೆಂದು ಆಶಿಸಿ ಉತ್ತರಕನ್ನಡ ಜಿಲ್ಲೆಯ ಕಾರವಾರದ ಸೋನಾರ್ವಾಡ ನಿವಾಸಿ ಅರುಣ್ ಎಸ್. ವರ್ಣೇಕರ್ ಎಂಬಾತ ಬೆರಳು ಕತ್ತರಿಸಿ ಕಾಳಿ ಮಾತೆಗೆ ರಕ್ತದ ತಿಲಕವಿಟ್ಟಿದ್ದರು.
ವರ್ಣೇಕರ್ ಅವರು ಮೋದಿಯ ಹುಚ್ಚು ಅಭಿಮಾನಿಯಾಗಿದ್ದು, 2019ರಲ್ಲಿ ಲೋಕಸಭೆ ಚುನಾವಣೆಗೂ ಮುನ್ನ ಕತ್ತಿಯಿಂದ ಬೆರಳು ಕತ್ತರಿಸಿಕೊಂಡಿದ್ದರು. ಬಳಿಕ ಕಾಳಿ ಮಾತೆಗೆ ರಕ್ತದ ತಿಲಕವಿಟ್ಟಿದ್ದರು. ಜತೆಗೆ ಸಾಯಿ ಬಾಬಾ, ಪ್ರಧಾನಿ ಮೋದಿಯ ಫೋಟೊಗೂ ರಕ್ತದ ತಿಲಕವಿಟ್ಟಿದ್ದರುಎಂದು ವರದಿ ತಿಳಿಸಿದೆ.
ಅರುಣ್ ಎಸ್. ವರ್ಣೇಕರ್ ಅವರು ಕಾಳಿಗೆ ರಕ್ತದ ತಿಲಕವಿಟ್ಟದ್ದು ಮಾತ್ರವಲ್ಲದೆ, ತನ್ನ ಮೈ ಮೇಲೂ ರಕ್ತವನ್ನು ಹಚ್ಚಿಕೊಂಡಿದ್ದರು. ಇವರು ಮನೆಯ ದೇವರ ಕೋಣೆಯಲ್ಲಿ ದೇವರ ಪೋಟೋಗಳ ಜತೆ ಪ್ರಧಾನಿ ಮೋದಿಯವರ ಫೋಟೊ, ಇರಿಸಿಕೊಂಡಿದ್ದಾರೆ ಎನ್ನಲಾಗಿದೆ.
2014ರಿಂದ 2029ರವರೆಗೆ ಮೋದಿ ಪ್ರಧಾನಿ ಆಗಿರುತ್ತಾರೆಂದು ರಕ್ತದಲ್ಲಿ ಗೋಡೆಯ ಮೇಲೆ ಬರೆದುಕೊಂಡಿದ್ದಾರೆ. ಎದೆಯ ಮೇಲೆ ಮೋದಿ ಟ್ಯಾಟೂ ಹಾಕಿಸಿಕೊಂಡು ಪ್ರಧಾನಿಯನ್ನು ದೇವರಂತೆ ಆರಾಧಿಸುತ್ತಿದ್ದಾರೆ. ಮೋದಿ ಬಾಬಾ ಎಂದು ಟ್ಯಾಟೋ ಹಾಕಿಸಿಕೊಂಡಿದ್ದಾರೆ.