ನ್ಯೂಸ್ ನಾಟೌಟ್ : ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಯುಎಸ್ನ 6 ಮಂದಿ ಶಿಕ್ಷಕಿಯರನ್ನ ಅಮೇರಿಕ ಪೊಲೀಸರು ಬಂಧಿಸಿರುವ ಆಘಾತಕಾರಿ ಘಟನೆ ಶನಿವಾರ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳನ್ನ ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಎರಡು ದಿನಗಳ ಅವಧಿಯಲ್ಲಿ ಒಟ್ಟು 6 ಮಂದಿ ಶಿಕ್ಷಕಿಯರನ್ನ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
6 ಶಿಕ್ಷಕಿಯರ ಪೈಕಿ ಅಮೆರಿಕಾದ ಡ್ಯಾನ್ವಿಲ್ಲೆ ಪಟ್ಟಣದ ಎಲ್ಲೆನ್ ಶೆಲ್ (38) ಎಂಬಾಕೆ ತಾನು ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ 16 ವರ್ಷದ ಇಬ್ಬರು ಹುಡುಗರೊಂದಿಗೆ ಮೂರು ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಇದು ಆಕೆಯ ವಿರುದ್ಧ 3ನೇ ಬಾರಿ ಕೇಳಿ ಬರುತ್ತಿರುವ ಅತ್ಯಾಚಾರದ ಆರೋಪ ಎಂದು ಎಫ್ಐಆರ್ನಲ್ಲಿ ದಾಖಲಿಸಲಾಗಿದೆ. ಸದ್ಯ ಆಕೆಯನ್ನ ಗ್ಯಾರಾರ್ಡ್ ಕೌಂಟಿ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವುಡ್ಲಾನ್ ಎಲಿಮೆಂಟರಿ ಶಾಲೆಯಲ್ಲಿ ಸಹಾಯಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಎಲ್ಲೆನ್ ಶೆಲ್, ಅದಕ್ಕೂ ಮುನ್ನ ಲ್ಯಾಂಕಾಸ್ಟರ್ ಎಲಿಮೆಂಟರಿ ಶಾಲೆಯಲ್ಲಿ ಉದ್ಯೋಗಿಯಾಗಿದ್ದರು. ಎಲ್ಲೆನ್ ಶೆಲ್ ಕೃತ್ಯದ ಬಗ್ಗೆ ಬೋಯ್ಲ್ ಕೌಂಟಿ ಶಾಲೆಯ ಅಧಿಕಾರಿಗಳು ಆಕೆಯ ಪೋಷಕರಿಗೆ ಪತ್ರವೊಂದನ್ನ ಕಳುಹಿಸಿದ್ದು, ಬಂಧನದ ಬಗ್ಗೆ ಎಚ್ಚರಿಸಿದ್ದಾರೆ. ಈಕೆ ವಿರುದ್ಧ ಲೈಂಗಿಕ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಎಲ್ಲೆನ್ ಶೆಲ್ರನ್ನ ಶಾಲಾ ಸಂಸ್ಥೆ ರಜೆಯ ಮೇಲೆ ಕಳಿಸಿತ್ತು ಎನ್ನಲಾಗಿದೆ.
ಇದೊಂದೇ ಪ್ರಕರಣವಲ್ಲದೇ, ಮಕ್ಕಳನ್ನ ಲೈಂಗಿಕವಾಗಿ ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ಯುಎಸ್ನಲ್ಲಿ 6 ಮಂದಿ ಶಿಕ್ಷಕಿಯರ ಮೇಲೆ ಪ್ರಕರಣಗಳು ದಾಖಲಾಗಿವೆ. ಅರ್ಕಾನ್ಸಾಸ್ ಶಿಕ್ಷಣತಜ್ಞೆ 32 ವರ್ಷದ ಹೀದರ್ ಹೇರ್ ಎಂಬಾಕೆಯ ಮೇಲೆ ಹದಿಹರೆಯದ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಆರೋಪ ಕೇಳಿ ಬಂದಿದೆ.
ಮತ್ತೊಂದೆಡೆ ತನ್ನ ಶಾಲಾ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಒಕ್ಲಹೋಮಾದ ಎಮಿಲಿ ಹ್ಯಾನ್ಕಾಕ್ (26) ಎಂಬ ಶಿಕ್ಷಕಿ ವಿರುದ್ಧ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಆಕೆಯನ್ನು ಕಳೆದ ಗುರುವಾರ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.