ನ್ಯೂಸ್ ನಾಟೌಟ್: ಹಿರಿಯ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಿರುವ ಮುಂಬೈನ ಕಾಮೋಥೆಯಲ್ಲಿ ವಾಸಿಸುತ್ತಿದ್ದ 41 ವರ್ಷದ ವ್ಯಕ್ತಿಯನ್ನು ಪೊಲೀಸರು ಕೊಲೆ ಆರೋಪದ ಮೇಲೆ ಬಂಧಿಸಿದೆ.
ತನ್ನ ಹೆಂಡತಿಯ ತಲೆಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದ್ದು, ದಂಪತಿಗೆ ಆಗಾಗ್ಗೆ ಮನೆಯಲ್ಲಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಹತ್ಯೆಗೀಡಾದವಳನ್ನು ಶುಲ್ವಂತ ಶೇಜಾಲ್ (32) ಎಂದು ಗುರುತಿಸಲಾಗಿದ್ದು, ಆಕೆಯ ಸಹೋದರ ನಾಮದೇವ್ ಮೆಟ್ಕರಿ ನೀಡಿದ ದೂರಿನ ಮೇರೆಗೆ ಆಕೆಯ ಪತಿ ಬೀರಪ್ಪ ಶೇಜಾಲ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.
ಎಪ್ರಿಲ್ 8 ರಂದು ರಾತ್ರಿ 10 ಗಂಟೆ ಸುಮಾರಿಗೆ ಮುಂಬೈನ ತ್ರಿಮೂರ್ತಿ ಕಾಂಪ್ಲೆಕ್ಸ್, ಸೆಕ್ಟರ್-11ರ ಕಾಮೋಥೆಯಲ್ಲಿ ಘಟನೆ ನಡೆದಿದ್ದು, ಆರೋಪಿ ಬೀರಪ್ಪ ಶೇಜಾಲ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು ಅಪರಾಧ ವಿಭಾಗದ ಹಿರಿಯ ಇನ್ಸ್ಪೆಕ್ಟರ್ ರವೀಂದ್ರ ಪಾಟೀಲ್ ತಿಳಿಸಿದ್ದಾರೆ. ಶೇಜಾಲ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರಿಂದ ಆತನ ಸ್ಥಳ ಪತ್ತೆಯಾಗಿಲ್ಲ ಎನ್ನಲಾಗಿದೆ.
“ನಾವು ಸ್ಥಳೀಯ ಮತ್ತು ರೈಲ್ವೇ ನಿಲ್ದಾಣಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸ್ಕ್ಯಾನ್ ಮಾಡಿದ್ದೇವೆ, ಆರೋಪಿಯು ಕಾಮೋಥೆಯಲ್ಲಿ ರೈಲು ಹತ್ತಿ ಕುರ್ಲಾದಲ್ಲಿ ಇಳಿದಿದ್ದಾನೆ, ನಂತರ ಆತ ಕೊಲ್ಲಾಪುರಕ್ಕೆ ಪ್ರಯಾಣಿಸಿದ್ದಾನೆ. ಕೊಲ್ಹಾಪುರ ಪೊಲೀಸರ ಸಹಾಯದಿಂದ ನಾವು ಶೇಜಾಲ್ ಅನ್ನು ಪತ್ತೆಹಚ್ಚಿದ್ದೇವೆ ” ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಸಂತ ಬಾಲು ಮಾಮ ಮಹಾರಾಜರ ದೇವಸ್ಥಾನದಲ್ಲಿ ಅವರು ಭಕ್ತರಿಗೆ ನೀಡುತ್ತಿದ್ದ ಮಹಾಪ್ರಸಾದವನ್ನು ಸೇವಿಸುತ್ತಿದ್ದರು. ಮಂಗಳವಾರ ಆತನನ್ನು ದೇವಸ್ಥಾನದ ಆವರಣದಿಂದ ಹಿಡಿದು ಕಾಮೋಠೆ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಮನೆ ಖರ್ಚಿಗೆ ಹಣ ನೀಡದೆ ಪದೇ ಪದೇ ಜಗಳವಾಡುತ್ತಿದ್ದ ಪತ್ನಿ ಶುಲ್ವಂತಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಆರೋಪಿ ಬೀರಪ್ಪ ತಪ್ಪೊಪ್ಪಿಕೊಂಡಿದ್ದು, ಪತ್ನಿಯ ಮೇಲೆ ಸುತ್ತಿಗೆಯಿಂದ ಹಲ್ಲೆ ನಡೆಸಿ ದೇವಸ್ಥಾನಕ್ಕೆ ತೆರಳಿದ್ದಾಗಿ ತಿಳಿಸಿದ್ದಾರೆ. ಕೊಲ್ಹಾಪುರದಲ್ಲಿ ಬಾಲು ಮಾಮ ಮಹಾರಾಜ್ ಅವರು ತಮ್ಮ ಹೆಂಡತಿಯನ್ನು ಕೊಂದಕ್ಕೆ ಆತ ಪಶ್ಚಾತ್ತಾಪ ಪಟ್ಟಿದ್ದು, ಕ್ಷಮೆದ್ದಾನೆ ಎಂದು ವರದಿ ತಿಳಿಸಿದೆ. ನಂತರ ಆತ ಕರ್ನಾಟಕದ ತನ್ನತಂದೆ- ತಾಯಿ ಮನೆಗೆ ಪರಾರಿಯಾಗಲು ಹೊರಟಿದ್ದರು, ಆದರೆ ನಾವು ಅವರನ್ನು ಕೊಲ್ಲಾಪುರದಲ್ಲಿ ಬಂಧಿಸಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ.