ನ್ಯೂಸ್ ನಾಟೌಟ್ : ಮನುಷ್ಯರು ಮೊಬೈಲ್ ಗೀಳಿಗೆ ಒಳಗಾಗಿರುವುದನ್ನು ಕೇಳಿದ್ದೇವೆ,ನೋಡಿದ್ದೇವೆ .ಆದರೆ ಪ್ರಾಣಿಗಳು ಕೂಡ ಮೊಬೈಲ್ ಬಳಕೆ ಮಾಡುತ್ತಾ ವಿಡಿಯೋ ನೋಡುತ್ತಾ ಮೈ ಮರೆಯುತ್ತಿವೆ ಅಂದ್ರೆ ನೀವು ನಂಬುತ್ತೀರಾ? ಹೌದು,ಕೋತಿಯೊಂದು ಮನೆ ಯಜಮಾನಿಯ ಮೊಬೈಲ್ ಮೂಲಕ ವಿಡಿಯೋವನ್ನು ನೋಡುತ್ತಾ ಚಿಪ್ಸ್ ತಿನ್ನುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಕೋತಿಯೊಂದು ಮೊಬೈಲ್ ಫೋನ್ ಅನ್ನು ಮನುಷ್ಯರಿಗಿಂತ ಫಾಸ್ಟ್ ಆಗಿ ಹೇಗೆ ಸ್ಕ್ರಾಲ್ ಮಾಡುತ್ತಿದೆ ಅಂತ ನೀವಿಲ್ಲಿ ಈ ವಿಡಿಯೋ ಮೂಲಕ ಕಾಣಬಹುದಾಗಿದೆ.
ಇಂತಹ ಅಪರೂಪದ ವಿಡಿಯೋವನ್ನು ಶೇರ್ ಮಾಡುವ ಮೂಲಕ ಅಭಿಮಾನಿ ಬಳಗದಿಂದ ಮೆಚ್ಚುಗೆಗೆ ಪಾತ್ರವಾಗಿರುವಂತಹ ಉದ್ಯಮಿ ಆನಂದ್ ಮಹೀಂದ್ರಾ ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. 25 ಸೆಕೆಂಡ್ಗಳ ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಬೆಡ್ ಮೇಲೆ ಮಲಗಿದ್ದರೆ, ಪಕ್ಕದಲ್ಲೇ ಕೋತಿಯೊಂದು ಕುಳಿತುಕೊಂಡು ಮೊಬೈಲ್ನ್ನು ಸ್ಕ್ರಾಲ್ ಮಾಡುತ್ತಾ ಒಂದೊಂದೇ ವೀಡಿಯೋವನ್ನು ನೋಡುತ್ತಿದೆ.ಅವಸರದಿಂದ ಸ್ಕ್ರಾಲ್ ಮಾಡುವುದನ್ನು ನೋಡಿದ್ರೆ ಒಂದು ಸಲ ನಾವು ದಂಗಾಗುವುದರಲ್ಲಿ ಅನುಮಾನವಿಲ್ಲ. ಈ ವಿಡಿಯೋವನ್ನು ಮೂರು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
ಈ ಬಡ ಕೋತಿಯನ್ನು ಇಂತಹ ಮಾನವೀಯತೆಯಿಂದ ರಕ್ಷಿಸಿ ಎಂದು ಬರೆದು ಈ ವಿಡಿಯೋವನ್ನು ಆನಂದ್ ಮಹೀಂದ್ರಾ ಟ್ವಿಟ್ ಮಾಡಿದ್ದಾರೆ.ಇಂದು ಸಾಮಾಜಿಕ ಜಾಲತಾಣ ಅನ್ನುವಂಥದ್ದು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆಯೆಂದರೆ ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಇಷ್ಟ ಪಟ್ಟು ನೋಡುವ ವ್ಯವಸ್ಥೆಯಲ್ಲಿ ನಾವಿದ್ದೇವೆ.ಬೋರಾದಾಗ, ಖುಷಿಯಾದಾಗ ಎಲ್ಲಾ ಸಂದರ್ಭಗಳಲ್ಲೂ ಮೊಬೈಲ್ ಅನ್ನೋದು ಬೇಕೆ ಬೇಕು.ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಅನ್ನೋ ಲೆವೆಲ್ ಗೆ ಬಂದು ತಲುಪಿದೆ.ಅದ್ರಲ್ಲೂ ಸಾಮಾಜಿಕ ಜಾಲತಾಣವ ಪ್ರಭಾವ ತುಂಬಾನೇ ಇದೆ.ಅಂತೆಯೇ ಈ ಕೋತಿ ಕೂಡ ಇನ್ಸ್ಟಾಗ್ರಾಮ್ ಗೆ ಎಡಿಕ್ಟ್ ಆದ ಹಾಗೆ ಕಂಡು ಬರುತ್ತಿದೆ.
ಈ ವಿಡಿಯೋ ನೋಡಿದ ಒಬ್ಬರು ಅಂತೂ ಕೋತಿಯನ್ನು ಕೂಡ ಮೊಬೈಲ್ ಫೋನ್ ಹಾಳು ಮಾಡಿತು ಎಂದು ಕಾಮೆಂಟ್ ಮಾಡಿದ್ದಾರೆ. ಡಿಜಿಟಲ್ ಡ್ರಗ್ನಿಂದ ಮನುಷ್ಯರು ಈಗಾಗಲೇ ಹಾಳಾಗಿ ಹೋಗಿದ್ದಾರೆ. ಕನಿಷ್ಠ ಪ್ರಾಣಿಗಳನ್ನಾದರು ಕಾಪಾಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಸ್ವಲ್ಪ ಹೊತ್ತು ಕೋತಿ ಕೈಲಿ ಮೊಬೈಲ್ ಇದ್ರೆ ಮುಂದೆ ರೈಲು ಹಾಗೂ ವಿಮಾನ ಟಿಕೆಟ್ ಕೂಡ ಅದೇ ಬುಕ್ ಮಾಡ್ಬಹುದು ಎಂದು ಕಾಮೆಂಟ್ ಮಾಡಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.