ನ್ಯೂಸ್ ನಾಟೌಟ್ : ಒಡಿಸ್ಸಾದ ಬೌದ್ನ ಬೌನ್ಸುನಿ ಪೊಲೀಸ್ ವ್ಯಾಪ್ತಿಯಲ್ಲಿರುವ ಪಲಾಸ್ಪಟಾ ಗ್ರಾಮದಲ್ಲಿ ಶುಕ್ರವಾರ ಮಹಿಳೆಯೊಬ್ಬರು ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವರನ್ನು ವಿರೋಧಿಸಿದಕ್ಕೆ ಹರಿತವಾದ ಆಯುಧದಿಂದ ಮಹಿಳೆಯನ್ನು ಥಳಿಸಿ ಕೊಂದ ಘಟನೆ ನಡೆದಿದೆ.
ಈ ವೇಳೆ ಸಂತ್ರಸ್ತೆಯು ಮನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಗ್ರಾಮಸ್ಥರು ಹಿಡಿದು ನಿರ್ದಯವಾಗಿ ಥಳಿಸಿದ್ದಾರೆ. ಸಂತ್ರಸ್ತೆಯನ್ನು ಸೂರ್ಯಕಾಂತಿ ಪ್ರಧಾನ್ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ಮತ್ತು ಆರು ವರ್ಷದ ಮಗಳನ್ನು ಅಗಲಿದ್ದಾರೆ ಎಂದು ವರದಿ ತಿಳಿಸಿದೆ.
ವರದಿಗಳ ಪ್ರಕಾರ, ‘ದಂಡ ನಾಚಾ’ ಎಂಬ ಕಲಾವಿದರ ಗುಂಪು ತಮ್ಮ ಪ್ರದರ್ಶನಕ್ಕಾಗಿ ಪಲಾಸಪಟ ಗ್ರಾಮದಲ್ಲಿ ಬೀಡು ಬಿಟ್ಟಿತ್ತು. ಪ್ರದರ್ಶಕರಲ್ಲಿ ಒಬ್ಬರಾದ ಸೂರ್ಯಕಾಂತಿ ಅವರ ಪತಿ ಉಗ್ರಸೇನ್ ಸೇಥಿಯವರು ಇಲ್ಲದಿದ್ದಾಗ ಅವರ ಮನೆಗೆ ಪ್ರವೇಶಿಸಿ ಈ ಕೃತ್ಯ ನಡೆಸಲಾಗಿದೆ.
ಇದನ್ನು ವಿರೋಧಿಸಿದ ಆಕೆಯ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಈ ವೇಳೆ ಮನೆಗೆ ಬಂದ ಆಕೆಯ ಆರು ವರ್ಷದ ಮಗಳು ಮನೆಯಿಂದ ತಪ್ಪಿಸಿಕೊಂಡು ಗ್ರಾಮಸ್ಥರನ್ನು ಕರೆದರು ಸಹಾಯಕ್ಕಾಗಿ ಕರೆದಿದ್ದಾಳೆ, ಈ ವೇಳೆ ಗ್ರಾಮಸ್ಥರು ಆತನನ್ನು ಹಿಡಿದು ಥಳಿಸಿದ್ದು, ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.