ನ್ಯೂಸ್ ನಾಟೌಟ್:ತೀವ್ರ ಹೊಟ್ಟೆ ನೋವಿನ ಕಾರಣದಿಂದ ನೆರೆಕರೆ ಮನೆಯ ಸ್ನೇಹಿತೆಯರಿಬ್ಬರು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಪಟ್ರಮೆ ಗ್ರಾಮದಿಂದ ವರದಿಯಾಗಿತ್ತು.ಇದೀಗ ಈ ಘಟನೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಆಹಾರದಲ್ಲಿ ಕಲಬೆರಕೆಯಾಗಿ ಮೃತಪಟ್ಟಿದ್ದಾರಾ ಎಂಬ ಬಗ್ಗೆ ಹಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, ಇಬ್ಬರೂ ಸ್ನೇಹಿತೆಯರಿಗೆ ಯಾರದ್ದಾದರೂ ಬೆದರಿಕೆ ಇದ್ದು ಆತ್ಮಹತ್ಯೆಗೆ ಶರಣಾಗಿದ್ದಾರಾ ಎಂಬ ಪ್ರಶ್ನೆಯೂ ಸಾರ್ವಜನಿಕರಲ್ಲಿ ಮೂಡಿದೆ.ಆದರೆ ನಿಖರ ಕಾರಣವೇನೆಂದು ತಿಳಿದು ಬಂದಿಲ್ಲ.
ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಪಟ್ರಮೆ ಗ್ರಾಮದ ಪಟ್ಟೂರಿನ ಬಾಬು ಹಾಗೂ ಗೀತ ದಂಪತಿಗಳ ಪುತ್ರಿ ರಕ್ಷಿತಾ (22) ಮತ್ತು ಆಕೆಯ ನೆರೆಮನೆಯ ಶ್ರೀನಿವಾಸ ಆಚಾರಿ ಹಾಗೂ ಪಾರ್ವತಿ ದಂಪತಿಗಳ ಪುತ್ರಿ ಲಾವಣ್ಯ (20) ಮೃತಪಟ್ಟ ಯುವತಿಯರಾಗಿದ್ದು,ಇಬ್ಬರೂ ಕೂಡ ಕಳೆದೊಂದು ವರ್ಷದಿಂದ ಅನಾರು ಹಾಗೂ ಮುಂಡೂರುಪಳಿಕೆ-ಉಪ್ಪಾರಪಳಿಕೆ ವಲಯದ ಸೇವಾ ನಿರತೆಯರಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿತ್ತು. ಇಬ್ಬರು ಕೂಡ ಸ್ನೇಹಿತೆಯಾಗಿದ್ದರು.ಭಾನುವಾರದಂದು ಇಬ್ಬರಿಗೂ ಹೊಟ್ಟೆ ನೋವು ಕಾಣಿಸಿಕೊಂಡಿತ್ತು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.ಇಬ್ಬರ ಮನೆಯಲ್ಲೂ ಆಕ್ರಂದನ ಮುಗಿಲು ಮುಟ್ಟಿದೆ.ಧರ್ಮಸ್ಥಳ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.