ನ್ಯೂಸ್ ನಾಟೌಟ್ : ಮುಂಬೈನ ಹಳ್ಳಿಯೊಂದರಿಂದ ಅಪರಿಚಿತ ಮಹಿಳೆಯ ಶವವನ್ನು ವಶಪಡಿಸಿಕೊಂಡ ಸುಮಾರು ಎರಡು ವಾರಗಳ ನಂತರ, ಆಕೆಯ ಮೇಲೆ ಅತ್ಯಾಚಾರ ಮತ್ತು ಕೊಂದ ಆರೋಪದ ಮೇಲೆ 36 ವರ್ಷದ ಆಟೋರಿಕ್ಷಾ ಚಾಲಕನನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಸುಮಾರು 35 ವರ್ಷ ವಯಸ್ಸಿನ ಮಹಿಳೆಯ ಶವವನ್ನು ಅಡವಲಿ-ಭಟವಲಿ ಗ್ರಾಮದ ಪ್ರತ್ಯೇಕ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಥಾಣೆ ಜಿಲ್ಲೆಯ ಠಾಕೂರ್ಪಾದ ಮೂಲದ ಆರೋಪಿಯನ್ನು ಬಂಧಿಸಲಾಗಿದೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಪ ಪೊಲೀಸ್ ಆಯುಕ್ತ ವಿವೇಕ್ ಪನ್ಸಾರೆ, “ಮಾರ್ಚ್ 22 ರಂದು ಮಹಿಳೆಯ ಶವ ಪತ್ತೆಯಾಗಿದೆ. ನಂತರ, ಅಪರಿಚಿತ ವ್ಯಕ್ತಿಯ ವಿರುದ್ಧ ತುರ್ಭೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು” ಎಂದು ಹೇಳಿದ್ದಾರೆ.
ತನಿಖೆಯ ನಂತರ, ಪೊಲೀಸರು ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಮಹಿಳೆ ಆಟೋರಿಕ್ಷಾದಲ್ಲಿ ಸ್ಥಳಕ್ಕೆ ಬಂದಿರುವುದು ಬೆಳಕಿಗೆ ಬಂದಿದೆ ಎಂದು ಅವರು ಹೇಳಿದರು.
“ಪೊಲೀಸರು ರಿಕ್ಷಾ ಚಾಲಕನನ್ನು ಪತ್ತೆಹಚ್ಚಿ ಅವನನ್ನು ಹಿಡಿದಿದ್ದಾರೆ. ಆತನ ವಿಚಾರಣೆಯ ಸಮಯದಲ್ಲಿ, ಆರೋಪಿಯು ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಮತ್ತು ಅವಳು ಅವನಿಂದ 1,000 ರೂ ಕೇಳಿದ್ದಾಳೆ ಅವನು ಹಣ ನೀಡಲು ನಿರಾಕರಿಸಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ ಬಳಿಕ ಆರೋಪಿಯು ಕಾಂಕ್ರೀಟ್ ಬ್ಲಾಕ್ನಿಂದ ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿದ್ದಾನೆ ಮತ್ತು ಆಕೆಯನ್ನು ಕೊಂದು, ಆಕೆಯ ಶವವನ್ನು ಸ್ಥಳದಲ್ಲಿ ಎಸೆದು ಪರಾರಿಯಾಗಿದ್ದಾನೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಪೊಲೀಸರು ಇದೀಗ ಈ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 376 ಅತ್ಯಾಚಾರ ಮತ್ತು ಕೊಲೆ ಆರೊಪದಡಿ ಪ್ರಕರಣ ದಾಖಲಾಗಿದೆ.