ನ್ಯೂಸ್ನಾಟೌಟ್: ದೆಹಲಿಯ ಜಿಬಿ ರೋಡ್ನಲ್ಲಿ ವೇಶ್ಯಾಗೃಹದೊಳಗೆ ದಾಳಿ ನಡೆಸಿ ಗುಂಡು ಹಾರಿಸಿ ಒಬ್ಬ ಲೈಂಗಿಕ ಕಾರ್ಯಕರ್ತೆಯನ್ನು ಕೊಂದು ಮಧ್ಯವರ್ತಿಯನ್ನು ಗಾಯಗೊಳಿಸಿದ ಮೂವರು ದುಷ್ಕರ್ಮಿಗಳನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮಾರ್ಚ್ 30 ರಂದು ಬಂದ ದೂರವಾಣಿ ಕರೆಯನ್ನು ಆಧರಿಸಿ ದೆಹಲಿಯ ಕಮಲಾ ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಅಪರಾಧ ಸ್ಥಳಕ್ಕೆ ತಲುಪಿದರು ಮತ್ತು ಇಬ್ಬರು ಲೈಂಗಿಕ ಕಾರ್ಯಕರ್ತೆ, ಮಧ್ಯವರ್ತಿ ಇಮ್ರಾನ್ (28) ನೆಲದ ಮೇಲೆ ಮಲಗಿರುವುದು ಕಂಡುಬಂದಿದೆ ಎಂದುಮೂಲಗಳು ತಿಳಿಸಿವೆ.
ಸಂತ್ರಸ್ತರನ್ನು ಚಿಕಿತ್ಸೆಗಾಗಿ ದೆಹಲಿಯ ಲೋಕನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಮ್ರಾನ್ ಅವರ ಭುಜಕ್ಕೆ ಗುಂಡು ಹಾರಿಸಿದಾಗ ಆಕೆಯ ಕತ್ತಿನ ಹಿಂಭಾಗದಲ್ಲಿ ಬುಲೆಟ್ ಗಾಯವಾಗಿತ್ತು ಎಂದು ವರದಿಯಾಗಿದೆ. ಲೈಂಗಿಕ ಕಾರ್ಯಕರ್ತೆ ತನ್ನ ಗಾಯಗಳಿಂದ ವಿಪರೀತವಾಗಿ ಬಳಲಿದ್ದ ಆಕೆ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಅಂಗಡಿಯೊಂದರಲ್ಲಿ ದರೋಡೆ ಮಾಡಲು ನಗರಕ್ಕೆ ಬಂದಿದ್ದಾಗ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ನಂತರ ಜಿಬಿ ರಸ್ತೆಗೆ ಹೋಗಲು ನಿರ್ಧರಿಸಿದ ಅವರು ಅಲ್ಲಿನ ಇಮ್ರಾನ್ ಮತ್ತು ವೇಶ್ಯಾಗೃಹದಲ್ಲಿದ್ದ ಇತರರೊಂದಿಗೆ ವಾಗ್ವಾದ ನಡೆಸಿದರು. ವಾಗ್ವಾದ ಹೆಚ್ಚಾಗಿ ದುಷ್ಕರ್ಮಿಗಳ ಬಳಿ ಪಿಸ್ತೂಲ್ ಇರುವುದು ಗಮನಕ್ಕೆ ಬಂದು ಅವರನ್ನು ಒಳ ಹೋಗದಂತೆ ತಡೆದಿದ್ದಾರೆ. ಈ ವೇಳೆ ಪಿಸ್ತೂಲ್ ಕಸಿದುಕೊಳ್ಳಲು ಪ್ರಯತ್ನಿಸಬಹುದು ಎಂಬ ಭಯದಿಂದ ಕಾಕಾ ಎಂಬಾತ ಬಂದೂಕನ್ನು ತೆಗೆದುಕೊಂಡು ಮಹಿಳೆ ಮತ್ತು ಮಧ್ಯವರ್ತಿ ಕಡೆಗೆ ಮನಬಂದಂತೆ ಗುಂಡು ಹಾರಿಸಿದ್ದಾನೆ ಎಂದು ವರದಿ ತಿಳಿಸಿದೆ.
ಘಟನೆಯ ತನಿಖೆಗೆ ಹಲವು ತಂಡಗಳನ್ನು ನಿಯೋಜಿಸಲಾಗಿತ್ತು. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು. ಅವರು ಅಪರಾಧ ಸ್ಥಳ ಮತ್ತು ಸುತ್ತಮುತ್ತ ಇರಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡಿದರು ಮತ್ತು ಸ್ಥಳದಿಂದ ಓಡಿಹೋಗುತ್ತಿರುವ ಮೂವರನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶ ಮತ್ತು ಪಂಜಾಬ್ನಲ್ಲಿ ದಾಳಿಗಳ ಸಾಕ್ಷಿಗಳನ್ನಾಧರಿಸಿ, ಕಾಕಾ, ಹ್ಯಾಪಿ ಮತ್ತು ಅನಿಲ್ ಎಂದು ಗುರುತಿಸಲಾದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಮೂವರೂ ಪಂಜಾಬ್ನ ಸಂಗ್ರೂರ್ ಜೈಲಿನ ಕೈದಿಗಳಾಗಿದ್ದರು ಎಂದು ತಿಳಿದುಬಂದಿದೆ.