ನ್ಯೂಸ್ ನಾಟೌಟ್ : ಜಾರ್ಖಂಡ್ನ ಧನ್ಬಾದ್ ಜಿಲ್ಲೆಯಲ್ಲಿ 70 ವರ್ಷದ ದೃಷ್ಟಿ ವಿಕಲಚೇತನ ಮಹಿಳೆಯ ಮೇಲೆ ಆಕೆಯ ಭೂ ಮಾಲೀಕ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಜಾರ್ಖಂಡ್ನ ರಾಜಧಾನಿ ರಾಂಚಿಯಿಂದ ಸುಮಾರು 170 ಕಿಮೀ ದೂರದಲ್ಲಿರುವ ಸುದಮ್ಡಿಹ್ ಪ್ರದೇಶದ ಕಾಲೋನಿಯಲ್ಲಿ ಸೋಮವಾರ ಮಹಿಳೆ ತನ್ನ ಮನೆಯಲ್ಲಿ ಒಬ್ಬರೇ ಇದ್ದಾಗ ಈ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಆಕೆ ಮತ್ತು ಆಕೆಯ ಸಂಬಂಧಿಕರು 55 ವರ್ಷದ ಮಾಜಿ ಭೂಮಾಲೀಕನ ವಿರುದ್ಧ ಬುಧವಾರ ಪೊಲೀಸ್ ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ನಂತರ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಸುದಮ್ದಿಹ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಪ್ರದೀಪ್ ರಾಣಾ ತಿಳಿಸಿದ್ದಾರೆ.
ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಆಕೆಯ ಸಂಬಂಧಿಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆರೋಪಿಯನ್ನು ಹಿಡಿಯಲು ಶೋಧವನ್ನು ಪ್ರಾರಂಭಿಸಲಾಗಿದೆ ಎಂದು ವರದಿ ತಿಳಿಸಿದೆ.
ಕೆಲವು ತಿಂಗಳ ಹಿಂದೆ ಸುದಮ್ದಿಹ್ ಪ್ರದೇಶಕ್ಕೆ ತೆರಳುವ ಮೊದಲು ಆರೋಪಿಯಾಗಿರುವ ಭೂಮಾಲಿಕನ ಬಾಡಿಗೆ ಮನೆಯಲ್ಲಿ ಈ ಹಿಂದೆ ವಾಸಿಸುತ್ತಿದ್ದರು ಎಂದು ಆಕೆಯ ಮಗ ಪೊಲೀಸರಿಗೆ ತಿಳಿಸಿದ್ದಾನೆ.