ನ್ಯೂಸ್ ನಾಟೌಟ್: ಇತ್ತೀಚೆಗೆ ಖಲಿಸ್ತಾನಿ ಪರ ಕಾರ್ಯಕರ್ತರು ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ನಿಂದ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿದನ್ನು ವಿರೋಧಿಸಿ ಭಾರತೀಯರು ಲಂಡನ್ನಲ್ಲಿರುವ ಹೈಕಮಿಷನ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಯಾವುದೇ ಅನಗತ್ಯ ಘಟನೆಗಳನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗಿದೆ.
ಪ್ರತಿಭಟನೆಯ ಸಂದರ್ಭದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ಭಾರತೀಯ ಬೆಂಬಲಿಗರೊಂದಿಗೆ ನೃತ್ಯ ಮಾಡಿ ಸಂತೋಷಗೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬ್ರಿಟೀಷ್ ಪೋಲೀಸ್ ಡ್ಯಾನ್ಸ್ ಮಾಡುತ್ತಿದ್ದಂತೆ ಹಿನ್ನೆಲೆಯಲ್ಲಿ ‘ಜೈ ಹೋ’ ಹಾಡು ಕೇಳಿಸುತ್ತದೆ.
ಕಳೆದ ಭಾನುವಾರ ಭಾರತೀಯ ಧ್ವಜದ ಅಪವಿತ್ರಗೊಳಿಸಿ ಅಗೌರವ ತೋರಿದ ಘಟನೆ ಬ್ರಿಟನ್ನ ಭಾರತೀಯ ಜನರಿಂದ ಅಭೂತಪೂರ್ವ ಬೆಂಬಲವನ್ನು ಹುಟ್ಟುಹಾಕಿತು. ಸೋಮವಾರ, ಮಾರ್ಚ್ 19 ರಂದು ಖಾಲಿಸ್ತಾನಿ ಪರ ಪ್ರತಿಭಟನಾಕಾರರು ಯುನೈಟೆಡ್ ಕಿಂಗ್ಡಮ್ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಸಿಖ್ ಸಮುದಾಯವು ಕೂಡ ನವದೆಹಲಿಯಲ್ಲಿರುವ ಬ್ರಿಟಿಷ್ ಹೈಕಮಿಷನ್ ಹೊರಗೆ ಪ್ರತಿಭಟನೆ ನಡೆಸಿತು.
ಸಿಖ್ ಸಮುದಾಯದ ಸದಸ್ಯರು ಕೂಡ “ಭಾರತ್ ಮಾತಾ ಕಿ ಜೈ” ಘೋಷಣೆಗಳನ್ನು ಕೂಗಿದ್ದರು.
ಯುನೈಟೆಡ್ ಕಿಂಗ್ಡಮ್ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ಖಲಿಸ್ತಾನಿ ಪರ ಬೆಂಬಲಿಗರ ಗುಂಪು ದಾಳಿ ಮಾಡಿ ಭಾರತದ ರಾಷ್ಟ್ರೀಯ ಧ್ವಜವನ್ನು ಕಿತ್ತೊಗೆದ ನಂತರ ಪ್ರತಿಭಟನೆಗಳು ನಡೆಯುತ್ತಿವೆ. ಹಳದಿ ಖಲಿಸ್ತಾನ್ ಧ್ವಜಗಳನ್ನು ಹಿಡಿದಿರುವ ಪುರುಷರು ಹೈ ಕಮಿಷನ್ ಕಟ್ಟಡವನ್ನು ಹತ್ತಿ ತ್ರಿವರ್ಣ ಧ್ವಜವನ್ನು ಕೆಳಗಿಳಿಸುತ್ತಿರುವುದನ್ನು ವೀಡಿಯೊಗಳು ತೋರಿಸಿವೆ. ಲಂಡನ್ನಲ್ಲಿನ ಹೈಕಮಿಷನ್ ಮೇಲೆ ನಡೆದ ದಾಳಿಯ ವಿರುದ್ಧ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದೆ.