ದೇಶ-ಪ್ರಪಂಚ

ಸಂತೋಷ ಸೂಚ್ಯಂಕ ವರದಿಯಲ್ಲಿ ಭಾರತಕ್ಕೆ 126ನೇ ಸ್ಥಾನ; ಫಿನ್‌ಲ್ಯಾಂಡ್ ಪ್ರಥಮ

ನ್ಯೂಸ್‌ನಾಟೌಟ್‌: ಫಿನ್‌ಲ್ಯಾಂಡ್ ಹೆಚ್ಚು ಸಂತೋಷದ ಜನರಿರುವ ದೇಶವಾಗಿದೆ. ವಿಶ್ವಸಂಸ್ಥೆಯ ಸಂತೋಷ ಸೂಚ್ಯಂಕ ಪಟ್ಟಿಯಲ್ಲಿ ಸತತ ಆರನೇ ಬಾರಿಗೆ ಫಿನ್‌ಲ್ಯಾಂಡ್ ಪ್ರಥಮ ಸ್ಥಾನ ಪಡೆದಿದೆ. ಆಡಳಿತ, ಮಾನವ ಹಕ್ಕುಗಳ ಅನುಸರಣೆ ಫಿನ್‌ಲ್ಯಾಂಡ್ ಮೊದಲ ಸ್ಥಾನ ಗಳಿಸಲು ಕಾರಣವಾಗಿದೆ. ಜತೆಗೆ ಇಲ್ಲಿ ಹುಟ್ಟಿದ ಮಗುವಿಗೆ ಒಂದು ವರ್ಷದವರೆಗೆ ಮಗುವಿನ ಬೆಳವಣಿಗೆಗೆ ಪೂರಕವಾಗುವ ಸೌಲಭ್ಯಗಳನ್ನು ನೀಡಲಾಗುತ್ತದೆ. ಅಲ್ಲದೇ ಪೋಷಕರಿಗೆ 10 ತಿಂಗಳ ಪೋಷಕ ರಜೆಯ ಸೌಲಭ್ಯ ಒದಗಿಸುವುದರಿಂದ ಮಗುವಿನೊಂದಿಗೆ ತಂದೆ ತಾಯಿ ಸಮಯ ಕಳೆಯಬಹುದು. ಇದರ ಹೊರತಾಗಿಯೂ ಇಲ್ಲಿನ ನಾಗರಿಕರಿಗೆ ಉಚಿತ ಶಿಕ್ಷಣ ಹಾಗೂ ಆರೋಗ್ಯ ಉಡುಗೊರೆಗಳನ್ನು ಅಲ್ಲಿನ ಸರ್ಕಾರ ಒದಗಿಸುತ್ತದೆ.

ಡೆನ್‌ಮಾರ್ಕ್ 2ನೇ ಸ್ಥಾನ, ಐಸ್ ಲ್ಯಾಂಡ್ 3ನೇ ಸ್ಥಾನ, ಇಸ್ರೇಲ್ ಹಾಗೂ ನೆದರ್ ಲ್ಯಾಂಡ್ ದೇಶಗಳು 4 ಮತ್ತು 5ನೇ ಸ್ಥಾನದಲ್ಲಿ ಅಪಘಾನಿಸ್ಥಾನ ಕೊನೆಯ ಅಂದರೆ 137ನೇ ಸ್ಥಾನಗಳಿಸಿದೆ. ವಿಪರ್ಯಾಸವೆಂದರೆ ಸಂತೋಷ ಸೂಚ್ಯಂಕದಲ್ಲಿ ಭಾರತ 126ನೇ ಸ್ಥಾನದಲ್ಲಿದೆ. ಆದರೆ ನೆರೆಯ ರಾಷ್ಟ್ರಗಳು ಈ ಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿವೆ. ನೆರೆ ರಾಷ್ಟ್ರಗಳಾದ ನೇಪಾಲ 18, ಚೀನಾ 64, ಪಾಕಿಸ್ಥಾನ 106, ಶ್ರೀಲಂಕಾ 112 ಸ್ಥಾನದಲ್ಲಿದೆ.

Related posts

17 ವರ್ಷದ ಹುಡುಗನ ಜೊತೆ 16ರ ಅಪ್ರಾಯ್ತೆಯ ದೈಹಿಕ ಸಂಬಂಧ..! ಗರ್ಭಿಣಿಯಾದ ಬಳಿಕ ಮಾತ್ರೆ ಸೇವಿಸಿ ಭ್ರೂಣವನ್ನು ಚರಂಡಿಗೆ ಎಸೆದ ಹುಡುಗಿ..!

ಸುಪ್ರೀಂ ಕೋರ್ಟ್ ಎದುರೇ ಉಂಗುರ ಬದಲಿಸಿಕೊಂಡು ಪ್ರಪೋಸ್ ಮಾಡಿಕೊಂಡ ಸಲಿಂಗಿ ವಕೀಲರ ಜೋಡಿ..! ಸುಪ್ರೀಂ ಕೋರ್ಟ್‌ ವಕೀಲರ ಅಸಮಾಧಾನವೇನು..?

ತಾಯಿ ಕೊನೆಯುಸಿರೆಳೆದಿದ್ದಾರೆಂದು ಘೋಷಿಸಿದ ಬಳಿಕ ದೇಹವನ್ನು ಊರಿಗೆ ಕೊಂಡೊಯ್ದ ಮಕ್ಕಳು..! ಬರೋಬ್ಬರಿ 18 ಗಂಟೆಗಳ ಸುದೀರ್ಘ ಪ್ರಯಾಣದ ಬಳಿಕ ಎದ್ದು ಕುಳಿತ ತಾಯಿ..! ಏನಿದು ಘಟನೆ?