ನ್ಯೂಸ್ ನಾಟೌಟ್: ನಾಗರಹಾವು ಕಡಿತಕೊಳಗಾದ ಹೆತ್ತ ತಾಯಿಯ ಪ್ರಾಣ ಕಾಪಾಡಲು ತನ್ನ ಪ್ರಾಣದ ಹಂಗು ತೊರೆದು ಧೈರ್ಯವಂತ ಹೆಣ್ಮಗಳು ಶ್ರಮ್ಯ ರೈ ಸಮಯಪ್ರಜ್ಞೆಯಿಂದ ಹಾವು ಕಚ್ಚಿದ ಸ್ಥಳಕ್ಕೆ ಬಾಯಿ ಇಟ್ಟು ಹಾವಿನ ವಿಷವನ್ನು ಹೀರಿ ತಾಯಿಯ ಪ್ರಾಣ ರಕ್ಷಣೆ ಮಾಡಿದ ಘಟನೆ ಪುತ್ತೂರು ತಾಲೂಕಿನ ಕೆಯ್ಯೂರು ಗ್ರಾಮದಲ್ಲಿ ನಿನ್ನೆ ಮಾರ್ಚ್ ೨೦ ರಂದು ನಡೆದಿತ್ತು.
ತನ್ನ ತಾಯಿ ತೋಟದಲ್ಲಿ ಕೆಲಸಮಾಡುತ್ತಿರುವಾಗ ಹಾವು ಕಚ್ಚಿದ್ದು ಈ ವೇಳೆ ಅವರ ಪುತ್ರಿ ಶ್ರಮ್ಯ ರೈ ಸ್ವಲ್ಪವೂ ಅಂಜದೆ ಧೈರ್ಯದಿಂದ ಹಾವಿನ ವಿಷವನ್ನು ಅಮ್ಮನ ಕಾಲಿನಿಂದ ಹೀರಿ ಹೊರಕ್ಕೆ ತೆಗೆದು ಅಮ್ಮನ ಪ್ರಾಣ ಕಾಪಾಡಿದ್ದಾಳೆ.
ಇದೀಗ ಶ್ರಮ್ಯ ರೈ ಧೈರ್ಯ ಮತ್ತು ಸಾಹಸಕ್ಕೇ ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ಶೌರ್ಯ ಪ್ರಶಸ್ತಿ ನೀಡಬೇಕೆನ್ನುವ ಆಗ್ರಹ ಗ್ರಾಮಸ್ಥರಿಂದ ಕೇಳಿ ಬಂದಿದೆ. ಈ ಹೆಣ್ಣುಮಗಳ ಸಾಹಸವನ್ನು ಸರಕಾರ ಗುರುತಿಸಿ ಪ್ರಶಸ್ತಿ ನೀಡಬೇಕು ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ.