ನ್ಯೂಸ್ ನಾಟೌಟ್ : 500 ರೂ ವೈಯಕ್ತಿಕ ಸಾಲವನ್ನು ಹಿಂದಿರುಗಿಸಲು ವಿಫಲವಾದ ಕಾರಣ 40 ವರ್ಷದ ವ್ಯಕ್ತಿಯನ್ನು ಆತನ ನೆರೆಹೊರೆಯವರು ಹೊಡೆದು ಕೊಂದ ಘಟನೆ ಪಶ್ಚಿಮ ಬಂಗಾಳದಲ್ಲಿ ಭಾನುವಾರ ಮಾರ್ಚ್ ೧೯ ರಂದು ನಡೆದಿದೆ.
ಮಾಲ್ಡಾ ಜಿಲ್ಲೆಯ ಬಮಂಗೋಲಾ ಪೊಲೀಸ್ ಠಾಣೆಯ ಗಂಗಾಪ್ರಸಾದ್ ಕಾಲೋನಿ ಪ್ರದೇಶದಲ್ಲಿ ಸಂಜೆ ಈ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಬನ್ಮಾಲಿ ಪ್ರಮಾಣಿಕ್ ಎಮಬ ಹೆಸರಿನ ವ್ಯಕ್ತಿ ಎಂದು ಗುರುತಿಸಲಾಗಿದೆ. ತನ್ನ ನೆರೆಯ ಪ್ರಫುಲ್ಲ ರಾಯ್ ಎಂಬಾತನಿಂದ ನಿಗದಿತ ಸಮಯದೊಳಗೆ ಹಿಂದಿರುಗಿಸುವುದಾಗಿ ತಿಳಿಸಿ ಅವರಿಂದ 500 ರೂ. ಪಡೆದುಕೊಂಡಿದ್ದರು. ಅದನ್ನು ಹಿಂತಿರುಗಿಸಲು ವಿಫಲರಾದ ಕಾರಣ ನೆರೆಯವರೊಂದಿಗೆ ಆಗಾಗ್ಗೆ ಜಗಳಕ್ಕೆ ಕಾರಣವಾಗುತ್ತಿತ್ತು.
ಭಾನುವಾರ ಸಂಜೆ ಪ್ರಫುಲ್ಲ ರಾಯ್ ಪ್ರಮಾಣಿಕ್ ಅವರ ಮನೆಗೆ ಹಣ ಬಂದಿದ್ದರು, ಆತನನ್ನು ಮನೆಯಲ್ಲಿ ಕಾಣದ ಕಾರಣ, ಸ್ಥಳೀಯ ಚಹಾ ಅಂಗಡಿಯಲ್ಲಿ ಸಿಗುವಂತೆ ಹೇಳಿದ್ದರು.
ಪ್ರಫುಲ್ಲ ರಾಯ್ ಟೀ ಅಂಗಡಿಯಲ್ಲಿ ಕುಳಿತು ಮತ್ತೆ ಹಣ ಕೇಳಿದ್ದಾರೆ, ಕೊಡಲು ನಿರಾಕರಿಸಿದಾಗ ಬಿದಿರಿನ ಬೆತ್ತದಿಂದ ಪ್ರಮಾಣಿಕ್ ಅವರನ್ನು ಥಳಿಸಲು ಪ್ರಾರಂಭಿಸಿದರು. ಆ ಏಟಿಗೆ ಪ್ರಮಾಣಿಕ್ ಅವರ ತಲೆಗೆ ಪೆಟ್ಟು ಬಿದ್ದು ಕುಸಿದು ಬಿಳುತ್ತಾರೆ, ಆದಾಗ್ಯೂ, ಅವರು ಪ್ರಜ್ಞೆ ಬಂದು ಮನೆಗೆ ನಡೆದೆ ಹೋಗುತ್ತಾರೆ. ಮರುದಿನ ಮನೆಯಲ್ಲಿ ರಕ್ತ ವಾಂತಿ ಮಾಡಲು ಪ್ರಾರಂಭಿಸಿದರು, ನಂತರ ಅವರನ್ನು ಸ್ಥಳೀಯ ಮುಡಿಪುಕೂರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು, ಮೃತನ ಕುಟುಂಬದವರು ಆರೋಪಿಗಳ ವಿರುದ್ಧ ಬಾಮನ್ ಗೋಳ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯನ್ನು ಗುರುತಿಸಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.