ನ್ಯೂಸ್ ನಾಟೌಟ್: ವಿದೇಶದಿಂದ ಬಾರತಕ್ಕೆ ಬರುವಾಗ ಕಳ್ಳತನ ಮಾಡಿದ ಚಿನ್ನಗಳನ್ನು ಕಣ್ಣು ತಪ್ಪಿಸಿ ಕದ್ದು ತರಲು ಹೋಗಿ ಸಿಕ್ಕಿ ಹಾಕಿ ಹಾಕಿಕೊಂಡವರೇ ಹೆಚ್ಚು. ಮನುಷ್ಯನ ಕಣ್ಣು ತಪ್ಪಿಸಿದರೂ ರೊಬೊಟಿಕ್ ಡಿಟೆಕ್ಟರ್ ಗಳ ಕಣ್ಣುತಪ್ಪಿಸಲು ಸಾಧ್ಯವಿಲ್ಲ. ಇದೀಗ 69.40 ಲಕ್ಷ ರುಪಾಯಿ ಮೌಲ್ಯದ ಚಿನ್ನವನ್ನು ಕದ್ದು ತರುತ್ತಿದ್ದ ಪ್ರಯಾಣಿಕರೊಬ್ಬರು ಸಿಕ್ಕಿ ಬಿದ್ದಿದ್ದು, ಈತ ಚಿನ್ನವನ್ನು ಸಾಗಿಸಲು ಮಾಡಿದ ಪ್ಲಾನ್ ನೋಡಿದರೆ ಎಂತವರೂ ಶಾಕ್ ಆಗ್ತೀರೆ.
ಇವತ್ತು ಬ್ಯಾಂಕಾಕ್ನಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂಡಿಗೋ ಸಂಸ್ಥೆಯ ವಿಮಾನ ಆಗಮಿಸಿತ್ತು. ಈ ವಿಮಾನದಲ್ಲಿ ಬಂದ ಪ್ರಯಾಣಿಕರೊಬ್ಬರು ಸುಮಾರು 1.2 ಕೆ.ಜಿ ಮೌಲ್ಯದ ಬಂಗಾರವನ್ನು ತನ್ನ ಎರಡು ಚಪ್ಪಲಿಗಳಲ್ಲಿ ಬಚ್ಚಿಟ್ಟಿದ್ದನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಈತನನ್ನು ಪೊಲೀಸರು ವಶಕ್ಕೆ ಪಡೆದಿದ್ದು ತನಿಖೆ ಮುಂದುವರಿಸಿದ್ದಾರೆ.