ನ್ಯೂಸ್ ನಾಟೌಟ್: ರೋಡಿನಲ್ಲಿ ಚಲಿಸುತ್ತಿರುವಾಗಲೇ ಕಾರಿನಿಂದ ಗರಿಗರಿ ನೋಟುಗಳನ್ನು ಎಸೆದ ವಿಡಿಯೋ ಒಂದು ವೈರಲ್ ಆದ ಬೆನ್ನಲ್ಲೇ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಯೂಟ್ಯೂಬರ್ ಜೋರಾವರ್ ಸಿಂಗ್ ಕಲ್ಸಿ ಮತ್ತು ಆತನ ಸ್ನೇಹಿತ ಲಕ್ಕಿ ಕಾಂಬೋಜ್ ಬಂಧಿತ ಆರೋಪಿಗಳು. ಮಾರ್ಚ್ 2ರಂದು ಗುರುಗ್ರಾಮ್ನ ಡಿಎಲ್ಎಫ್ ಗಾಲ್ಫ್ ಕೋರ್ಸ್ ರಸ್ತೆಯ ಕೆಳಸೇತುವೆಯಲ್ಲಿ ಈ ಘಟನೆ ನಡೆದಿದೆ. ಅಪಾಯಕಾರಿಯಾಗಿ ಕಾರು ಚಲಾಯಿಸುತ್ತಾ, ಹಿಂಬದಿಯಿಂದ ನೋಟುಗಳನ್ನು ಎಸೆಯುವ ವಿಡಿಯೋ ಮಾಡಿ ಸೋಶಿಯಲ್ ಮಿಡಿಯಾದಲ್ಲಿ ಹರಿಯಬಿಡಲಾಗಿತ್ತು. ಈ ದೃಶ್ಯ ಹಿಂದಿಯಲ್ಲಿರುವ ‘ಫರ್ಜಿ’ ಸಿರೀಸ್ನ ಶಾಹಿದ್ ಕಪೂರ್, ಕೆಕೆ ಮೆನನ್ ಅಭಿನಯದ ರೀ ಕ್ರಿಯೆಟ್ ವಿಡಿಯೋಎಂದಿದ್ದುಜಾಲತಾಣದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆದ ಬೆನ್ನಲ್ಲೇ ಅದನ್ನು ಡಿಲೀಟ್ ಮಾಡಲಾಗಿತ್ತು. ಆದರೆ ಪೊಲೀಸರು ಅಪಾಯಕಾರಿ ಚಾಲನೆ ಮತ್ತು ಇತರರ ಜೀವಕ್ಕೆ ಅಪಾಯನ್ನುಂಟು ಮಾಡುವ ಮೋಟಾರು ವಾಹನ ಕಾಯಿದೆ ಅಡಿಯಲ್ಲಿ ದಿಲ್ಲಿ ಮೂಲದ ಯೂಟ್ಯೂಬರ್ ಜೋರಾವರ್ ಸಿಂಗ್ ಕಲ್ಸಿ ಮತ್ತು ಆತನ ಸ್ನೇಹಿತ ಲಕ್ಕಿ ಕಾಂಬೋಜ್ ನನ್ನು ಬಂಧಿಸಿದ್ದಾರೆ. ಆರೋಪಿಗಳು ರೀ ಕ್ರಿಯೆಟ್ ವಿಡಿಯೋ ಮಾಡಿದ್ದರು. ಇದೊಂದು ನಟನೆ, ಮಾತ್ರ ಅವರು ಅಲ್ಲಿ ಬಳಸಿದ ನೋಟುಗಳು ನಕಲಿ. ಇವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.