ನ್ಯೂಸ್ ನಾಟೌಟ್: ಸಾಮಾನ್ಯವಾಗಿ ಹೊಟ್ಟೆ ನೋವಾದರೆ ಫುಡ್ ಪಾಯಿಸನ್ ಏನಾದರೂ ಆಗಿರಬಹುದು ಎಂದು ಸುಮ್ಮನಾಗುವವರೆ ಹೆಚ್ಚು . ಆದರೆ ಇಲ್ಲೊಬ್ಬ ವಿಪರೀತ ಹೊಟ್ಟೆ ನೋವಿನಿಂದ ಆಸ್ಪತ್ರೆ ದಾಖಲಾಗಿದ್ದಾನೆ. ಈತನ ನರಳಾಟ ಕಂಡು ಸ್ಕ್ಯಾನಿಂಗ್ ಮಾಡಿಸಲಾಗಿದೆ. ಆದರೆ ಕೆಲವೇ ಸಮಯದಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ ಕಂಡು ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ. ಅಷ್ಟಕ್ಕೂ ಆತನ ಸ್ಕ್ಯಾನಿಂಗ್ ರಿಪೋರ್ಟ್ ತಿಳಿದರೆ ನೀವೂ ಶಾಕ್ ಆಗೋದಂತೂ ಖಂಡಿತಾ.
ಐದು ದಿನಗಳ ಹಿಂದೆ ನೇಪಾಳದ ಆಸ್ಪತ್ರೆವೊಂದರಲ್ಲಿ 26 ವರ್ಷದ ನೂರ್ಸಾದ್ ಎಂಬ ಹೆಸರಿನ ಯುವಕನೊಬ್ಬನನ್ನು ದಾಖಲಿಸಲಾಗಿತ್ತು. ಈತ ವಿಷರೀತ ಹೊಟ್ಟೆನೋವಿನಿಂದ ಚಡಪಡಿಸುತ್ತಿದ್ದ, ತಕ್ಷಣ ಸ್ಕ್ಯಾನಿಂಗ್ ಮಾಡಿಸಲಾಗಿದೆ. ಸ್ಕ್ಯಾನಿಂಗ್ ರಿಪೋರ್ಟ್ನಲ್ಲಿ ಆತನ ಹೊಟ್ಟೆಯೊಳಗಡೆ ವೋಡ್ಕಾ ಬಾಟಲಿ ಇರುವುದು ಪತ್ತೆಯಾಗಿದೆ. ಎರಡೂವರೆ ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಬಾಟಲಿಯನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ವೋಡ್ಕಾ ಬಾಟಲಿ ಆತನ ಕರುಳಿಗೆ ಹಾನಿಯುಂಟು ಮಾಡಿದ್ದು, ಇದರಿಂದಾಗಿ ಆತ ಸಹಿಸಿಕೊಳ್ಳಲಾಗದಷ್ಟು ಹೊಟ್ಟೆ ನೋವನ್ನು ಅನುಭವಿಸಿದ್ದ. ಜೊತೆಗೆ ಮಲ ಸೋರಿಕೆ ಮತ್ತು ಕರುಳಿನ ಊತಕ್ಕೂ ಕಾರಣವಾಗಿದೆ. ಆದರೆ ಶಸ್ತ್ರಚಿಕಿತ್ಸೆ ನಂತರ ಅಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಹೌದು ಕೆಲವು ದಿನಗಳ ಹಿಂದೆಯಷ್ಟೇ ನೂರ್ಸಾದ್ ತನ್ನ ಸ್ನೇಹಿತರೊಂದಿಗೆ ಪಾರ್ಟಿಯಲ್ಲಿ ಭಾಗಿಯಾಗಿದ್ದಾನೆ. ಬಲವಂತವಾಗಿ ನೂರ್ಸಾದ್ಗೆ ಕುಡಿಸಲಾಗಿದೆ. ನಂತರ ಬಾಟಲಿಯನ್ನು ಗುದದ್ವಾರದ ಮೂಲಕ ಹೊಟ್ಟೆಗೆ ತಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಸ್ನೇಹಿತನೊಬ್ಬನನ್ನು ಈಗಾಗಲೇ ಬಂಧಿಸಲಾಗಿದೆ. ಜೊತೆಗೆ ಅನೇಕ ಸಹಚರರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ನೂರ್ಸಾದ್ನ ಇತರ ಕೆಲ ಸ್ನೇಹಿತರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ರೌತಹತ್ನ ಪೊಲೀಸ್ ವರಿಷ್ಠಾಧಿಕಾರಿ ಬೀರ್ ಬಹದ್ದೂರ್ ಬುಧಾ ಮಗರ್ ಹೇಳಿಕೆ ನೀಡಿದ್ದಾರೆ.