ನ್ಯೂಸ್ ನಾಟೌಟ್ :ಇಬ್ಬರು ಮಕ್ಕಳ ತಾಯಿ ಪುತ್ರಿಯೊಂದಿಗೆ ಆತ್ಮಹತ್ಯೆಗೆ ಶರಣಾದ ಘಟನೆ ಕಳೆದ ಬುಧವಾರ ಮಂಗಳೂರಿನಲ್ಲಿ ನಡೆದಿತ್ತು.ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಕೊಡಿಯಾಲಗುತ್ತು ಪರಿಸರದ ಮನೆಯೊಂದರಲ್ಲಿ ಕಳೆದ ಬುಧವಾರ ತನ್ನ ಪುತ್ರಿಯೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.ಕೇಶವ ಬಂಧಿತ ಆರೋಪಿ. ಈತನನ್ನು ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಬಂಧಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಹಿಳೆಯ ಮನೆಯಲ್ಲಿ ಪೊಲೀಸರಿಗೆ ಡೆತ್ನೋಟ್ ದೊರೆಕಿದೆ. ಈ ಆಧಾರದಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ವಿಜಯಾ (33) ಅವರು ತನ್ನ ನಾಲ್ಕು ವರ್ಷದ ಪುತ್ರಿ ಶೋಭಿಕಾ ಹಾಗೂ ಇನ್ನೋರ್ವಳು 12 ವರ್ಷದ ಪುತ್ರಿಯೊಂದಿಗೆ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. 12 ವರ್ಷದ ಪುತ್ರಿ ಘಟನೆಯಿಂದ ಪಾರಾಗಿದ್ದಳು. ವಿಜಯಾ ಮತ್ತು ಶೋಭಿಕಾ ಮೃತಪಟ್ಟಿದ್ದರು.