ನ್ಯೂಸ್ ನಾಟೌಟ್:ಹೆದ್ದಾರಿ ಸೇರಿದಂತೆ ಯಾವುದೇ ರಸ್ತೆ ಕಾಮಗಾರಿಗಳು ಬೇಗನೆ ಪೂರ್ಣಗೊಳ್ಳುವುದು ಬಾರಿ ಕಡಿಮೆ. ಎಷ್ಟೇ ಹರಸಹಾಸ ಪಟ್ಟರೂ ಕನಿಷ್ಟ ೪ ತಿಂಗಳಾದರೂ ಬೇಕು.ಹೀಗಾಗಿ ಭಾರತದಲ್ಲಿ ಹಲವು ರಸ್ತೆಗಳ ಕಾಮಗಾರಿ ಅಮೆಗತಿಯಲ್ಲಿ ಸಾಗುತ್ತಿದೆ.ಇದೀಗ ಆನಂದ್ ಮಹೀಂದ್ರ ರಸ್ತೆ ಕಾಮಗಾರಿ ಕುರಿತು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದು ಭಾರತವನ್ನೇ ನಾಚಿಸುವಂತಿದೆ. ಕಾರಣ ಕೇವಲ 48 ಗಂಟೆಯಲ್ಲಿ ಅಂದರೆ ಎರಡೇ ದಿನದಲ್ಲಿ ಹೆದ್ದಾರಿ ಅಗೆದು, ಅಂಡರ್ ಪಾಸ್ ಸುರಂಗ ಅಳವಡಿಸಿ, ಸಂಚಾರಕ್ಕೆ ಮುಕ್ತ ಮಾಡಲಾಗಿದೆ. ಈ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.
ಆನಂದ್ ಮಹೀಂದ್ರ ಹಂಚಿಕೊಂಡಿರುವ ವಿಡಿಯೋ ನೆದರ್ಲೆಂಡ್ ದೇಶದ ಕಾಮಗಾರಿ ವಿಡಿಯೋ. ರಾತ್ರಿಯಾಗುತ್ತಿದ್ದಂತೆ ಜೆಸಿಬಿ, ಕೆಲಸಗಾರರು, ಕ್ರೇನ್ ಸೇರಿದಂತೆ ಭಾರಿ ವಾಹನಗಳು ಆಗಮಿಸಿ ಏಕಾಏಕಿ ಹೆದ್ದಾರಿಯನ್ನೇ ಅಗೆಯಲು ಶುರು ಮಾಡಿದೆ. ಹತ್ತಾರು ಜೆಸಿಬಿ, ಕ್ರೇನ್, ಟಿಪ್ಪರ್ ಸೇರಿದಂತೆ ಹಲವು ವಾಹನಗಳು ಕಾಮಗಾರಿ ಶುರುಮಾಡಿವೆ. ಕ್ರೇನ್ ಮೂಲಕ ಅಂಡರ್ ಪಾಸ್ ಸುರಂಗ ಅಳವಡಿಸಿ ಮತ್ತೆ ಮಣ್ಣು ಹಾಕಲಾಗಿದೆ. ಬಳಿಕ ಹೆದ್ದಾರಿಗೆ ಡಾಮರೀಕರಣವೂ ಮಾಡಲಾಗಿದೆ. ಈ ಎಲ್ಲಾ ಕೆಲಸಗಳನ್ನು ಕೇವಲ 48 ಗಂಟೆಯಲ್ಲಿ ಮಾಡಿ ಮುಗಿಸಲಾಗಿದೆ.
ಆನಂದ್ ಮಹೀಂದ್ರ ಈ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಭಾರತದಲ್ಲಿ ಕಾಮಗಾರಿ ವೇಗ ಪಡೆದುಕೊಂಡಿದೆ. ಆದರೆ ಈ ರೀತಿಯ ಕಾಮಗಾರಿ ಹಾಗೂ ಕೌಶಲ್ಯದ ಅವಶ್ಯಕತೆ ಇದೆ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೆ ಕೆಲವರು ಭಾರತದಲ್ಲಿ ಕಾಮಗಾರಿ ಆರಂಭಿಸಿದ ರಸ್ತೆ ಪೂರ್ಣಗೊಳ್ಳುವಾಗ ಮತ್ತೊಂದು ಪೀಳಿಗೆ ಬಂದಿರುತ್ತದೆ. ಇಷ್ಟೇ ಅಲ್ಲ ಕಾಮಗಾರಿ ಮುಕ್ತಾಯವಾಗುವಾಗ ಇದರ ಹಿಂದಿನ ಎಲ್ಲಾ ಶಕ್ತಿಗಳು ಶ್ರೀಮಂತರಾಗಿರುತ್ತಾರೆ ಎಂದು ಭಾರತದ ವ್ಯವಸ್ಥೆಯನ್ನು ಟೀಕಿಸಿದ್ದಾರೆ.
ಶನಿವಾರ ಹಾಗೂ ಭಾನುವಾರ ಕಾಮಗಾರಿ ಪೂರ್ಣಗೊಳಿಸಿ, ಸೋಮವಾರ ಸಾರ್ವಜನಿಕರಿಗೆ ಸಂಚಾರಕ್ಕೆ ಮುಕ್ತಕ್ಕೆ ಅವಕಾಶ ಮಾಡಿಕೊಡಲಾಗಿದೆ. ಈ ರೀತಿಯ ಆಲೋಚನೆ, ತುಡಿತ ಭಾರತದಲ್ಲಿ ಬರವುದು ಸಾಧ್ಯವಿಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.