ನ್ಯೂಸ್ ನಾಟೌಟ್: ಇತ್ತೀಚೆಗೆ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವಾಗಲೇ ಎದೆನೋವು ಕಾಣಿಸಿಕೊಂಡು ಮೃತಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಹೈದರಾಬಾದ್ನ ಆಸೀಫ್ ನಗರ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದವಿಶಾಲ್ ಎಂಬವರು ಜಿಮ್ನಲ್ಲಿ ವ್ಯಾಯಾಮ ಮಾಡುತ್ತಿರುವಾಗಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಎಂದಿನಂತೆ ವಿಶಾಲ್ ಅವರು ಪುಶ್ ಅಪ್ ಮಾಡುತ್ತಿದ್ದಾಗ ದೇಹದ ಮೇಲಿನ ನಿಯಂತ್ರಣ ತಪ್ಪಿ ನೆಲದ ಮೇಲೆ ಕುಸಿದು ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಮ್ ಕೇಂದ್ರದಲ್ಲಿದ್ದ ಇತರರು ಕೂಡಲೇ ಜಿಮ್ ತರಬೇತುದಾರರನ್ನು ಕರೆಸಿ ವಿಶಾಲ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದರು. ಆಗ ವಿಶಾಲ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇನ್ಫಾರ್ಮೇಶನ್ (ಎನ್ಸಿಬಿಐ) ಪ್ರಕಾರ, ಭಾರತದಲ್ಲಿ ಐದನೇ ಒಂದು ಭಾಗದಷ್ಟು ಸಾವುಗಳು ಹೃದಯಾಘಾತ, ಹೃದಯಸ್ತಂಭನ ಮತ್ತು ಪಾರ್ಶ್ವವಾಯುಗಳಿಂದ ಸಂಭವಿಸುತ್ತದೆ. ಇದರಲ್ಲಿ ಯುವ ಸಮೂಹದ ಜನಸಂಖ್ಯೆಯೂ ಸೇರಿರುವುದಾಗಿ ತಿಳಿಸಿದೆ. ಈ ಹಿಂದೆ ನಟ ಪುನಿತ್ ರಾಜ್ಕುಮಾರ್ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವಾಗಲೇ ಎದೆನೋವು ಕಾಣಿಸಿಕೊಂಡು ಬಳಿಕ ಮೃತಪಟ್ಟಿದ್ದರು.