ನ್ಯೂಸ್ ನಾಟೌಟ್ : ಪ್ರಧಾನಿ ನರೇಂದ್ರ ಮೋದಿ ೨೬ನೇ ಯುವ ಜನೋತ್ಸವಕ್ಕೆ ಚಾಲನೆ ನೀಡುವುದಕ್ಕೆ ಹುಬ್ಬಳ್ಳಿಗೆ ಆಗಮಿಸಿದ ವೇಳೆ ಭಾರಿ ಭದ್ರತಾ ಲೋಪ ಎದುರಾಗಿತ್ತು. ಈ ವೇಳೆ ಬಾಲಕನೊಬ್ಬ ಅವರತ್ತ ನುಗ್ಗಿ ಹೂವಿನ ಹಾರ ಹಾಕಲು ಯತ್ನಿಸಿದ್ದಾನೆ. ತಕ್ಷಣ ಎಚ್ಚೆತ್ತ ಭದ್ರತಾ ಸಿಬ್ಬಂದಿ ಆತನನ್ನು ಹಿಡಿದು ಪಕ್ಕಕ್ಕೆ ಎಳೆದಿದ್ದಾರೆ. ಈ ಗಡಿಬಿಡಿಯ ನಡುವೆಯೂ ಪ್ರಧಾನಿ ಮೋದಿ ಯುವಕನಿಂದ ಹೂವಿನ ಹಾರವನ್ನು ಪಡೆದುಕೊಂಡು ತನ್ನ ಕಾರಿನ ಮೇಲೆ ಇರಿಸಿದ್ದು ವಿಶೇಷವಾಗಿತ್ತು.ಸದ್ಯ ಆ ಬಾಲಕನಿಗೆ ಸನ್ಮಾನ ಮಾಡಿ ಶುಭಾಶಯ ತಿಳಿಸಲಾಗಿದೆ.
ಶುಭಾಶಯಗಳ ಸುರಿಮಳೆ:
ಪ್ರಧಾನಿ ಮೋದಿಗೆ ಹಾರ ಹಾಕಿದ ಬಾಲಕ ಹುಬ್ಬಳ್ಳಿಯ ತೊರವಿ ಹಕ್ಕಲದಲ್ಲಿ ನೆಲೆಸಿರೋ ಕುನಾಲ್. ಈ ಬಾಲಕನಿಗೀಗ ಶುಭಾಶಯಗಳ ಮಹಾಪೂರ ಹರಿದು ಬರ್ತಿದೆ. ಬಾಲಕನ ಮನೆಗೆ SSK ಸಮಾಜದ ರಾಜ್ಯಾಧ್ಯಕ್ಷ ಅಶೋಕ ಕಾಟನೆ, ಉಪ ಮುಖ್ಯ ಧರ್ಮದರ್ಶಿ ಭಾಸ್ಕರ್ಜಿ ತೂರಿ ಭೇಟಿ ನೀಡಿದ್ರು.ಮುಖಂಡರು ಬಾಲಕನಿಗೆ ಸಿಹಿ ತಿನಿಸಿ ಹಾರ ಹಾಕಿ ಸನ್ಮಾನ ಮಾಡಿದ್ರು. ಕುನಾಲ್ ಅಭಿಮಾನದಿಂದ ಮೋದಿಗೆ ಹಾರ ಹಾಕೋದಕ್ಕೆ ಹೋಗಿದ್ದಾನೆ. ಆದ್ರೆ ಭದ್ರತೆ ನಡುವೆಯೂ ಹೋಗಿರೋದು ತಪ್ಪು ಎಂದು ಮುಖಂಡರು ಅಭಿಪ್ರಾಯಪಟ್ಟರು.