ಕರಾವಳಿಸುಳ್ಯ

ಪ್ರಾ.ಕೃ.ಪ.ಸ.ಸಂ.ನಿ.ಸಂಪಾಜೆ ಶತ ಸಂಭ್ರಮಕ್ಕೆ ದಿನಗಣನೆ:ಜ.21,22 ರಂದು ಅದ್ದೂರಿ ಕಾರ್ಯಕ್ರಮ,ಸಾಧಕರಿಗೆ ಸನ್ಮಾನ

ನ್ಯೂಸ್ ನಾಟೌಟ್ : ಜ. 21 ಮತ್ತು 22 ರಂದು ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ.ಸಂಪಾಜೆ ಇದರ ಶತ ಸಂಭ್ರಮ ಕಾರ್ಯಕ್ರಮ ದಕ್ಷಿಣ ಕನ್ನಡ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ವಠಾರ, ಸಂಪಾಜೆಯಲ್ಲಿ ನಡೆಯಲಿದೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ ಹೇಳಿದರು.

ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತನಾಡಿದರು. ಕಲ್ಲುಗುಂಡಿಯ ಕೂಲಿಶೆಡ್ ನಿಂದ ಶತಮಾನೋತ್ಸವ ಸಭಾಂಗಣಕ್ಕೆ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ನಿತ್ಯಾನಂದ ಮುಂಡೋಡಿಯವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಶತಮಾನೋತ್ಸವದ ಉದ್ಘಾಟನಾ ಸಮಾರಂಭ, ವಿಚಾರಗೋಷ್ಠಿ ಹಾಗೂ ಖ್ಯಾತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು ಶತ ಸಂಭ್ರಮಕ್ಕೆ ಸಕಲ ರೀತಿಯ ಸಿದ್ಧತೆ ನಡಿಯುತ್ತಿದೆ ಎಂದು ಮಾಹಿತಿ ನೀಡಿದರು.

ಈ ವೇಳೆ ಸನ್ಮಾನ ಸಮಿತಿಯ ಸಂಚಾಲಕ ಕೆ.ದಾಮೋದರ ಮಾಸ್ತರ್ ಮಾತನಾಡಿ “ಶತ ಸಂಭ್ರಮ ಅಂಗವಾಗಿ ಸಾಧಕರ ಪಟ್ಟಿಯನ್ನು ಈಗಾಗಲೇ ರಚಿಸಲಾಗಿದ್ದು, ಶತಮನೋತ್ಸವ ಉದ್ಘಾಟನಾ ಸಮಾರಂಭ, ವಿಚಾರಗೋಷ್ಠಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾಧಕರನ್ನು ಗುರುತಿಸಿ ಅವರಿಗೆ ಸನ್ಮಾನಿಸಲಾಗುವುದು ಹಾಗೂ 150ಕ್ಕೂ ಹೆಚ್ಚಿನ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಅಭಿನಂದನೆ ಪತ್ರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ ಹಮೀದ್, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಸಂಪಾಜೆ ಇದರ ಆಡಳಿತ ಮಂಡಳಿಯ ಉಪಾಧ್ಯಕ್ಷ ಮಹಮ್ಮದ್ ಕುಂಞ ಗೂನಡ್ಕ, ಗಣಪತಿ ಭಟ್ ಪಿ. ಎನ್. ವೀರೇಂದ್ರ ಕುಮಾರ್ ಜೈನ್, ಜಗದೀಶ್ ಕೆ.ಪಿ, ಯು. ಬಿ ಚಕ್ರಪಾಣಿ, ಆನಂದ ಪಿ. ಎಲ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.

Related posts

ಅಧಿಕಾರಿಗಳು ಚಿರತೆ ಕೊಂದರೆ ಶಿಕ್ಷೆ ಇಲ್ಲವೇ? ಬೆಂಗಳೂರಿನಲ್ಲಿ ಕಾರ್ಯಾಚರಣೆ ವೇಳೆ ಅಧಿಕಾರಿಗಳ ಗುಂಡೇಟಿಗೆ ಬಲಿಯಾದ ಚಿರತೆ ಬಗ್ಗೆ ಕಾನೂನು ಕ್ರಮವೇನು?

ಅಡ್ಕಾರ್ ನಲ್ಲಿ ಬಳಿ ರಿಕ್ಷಾ- ಬೈಕ್ ಡಿಕ್ಕಿ, ಸವಾರರಲ್ಲಿ ಓರ್ವನಿಗೆ ಗಂಭೀರ ಗಾಯ, ಆಸ್ಪತ್ರೆಗೆ ದಾಖಲು

ಬಿಜೆಪಿಗೆ ರಾಜಿನಾಮೆ ನೀಡಿ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾದ ಜಗದೀಶ್‌ ಶೆಟ್ಟರ್,ಮಾಜಿ ಸಿ.ಎಂ.ನ್ನು ಆತ್ಮೀಯವಾಗಿ ಬರಮಾಡಿಕೊಂಡ ಮಲ್ಲಿಕಾರ್ಜುನ ಖರ್ಗೆ