ನ್ಯೂಸ್ ನಾಟೌಟ್ : ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಒಬಿಜಿ ವಿಭಾಗದ ಪ್ರೊಫೆಸರ್ ಹಾಗೂ ಮುಖ್ಯಸ್ಥರಾಗಿರುವ ಡಾ. ಗೀತಾ ದೊಪ್ಪಾರವರು ಎರಡು ರಾಷ್ಟ್ರೀಯ ಪ್ರಶಸ್ತಿಗಳಿಗೆ ಬಾಜನರಾಗಿದ್ದಾರೆ. ಡಿ. 27,28 ರಂದು ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆದ IMA NATCON 22 ಪ್ರಶಸ್ತಿ ಸಮಾರಂಭದಲ್ಲಿ ಇವರಿಗೆ ಎರಡು ರಾಷ್ಟೀಯ ಪ್ರಶಸ್ತಿ ಲಭಿಸಿದೆ.
ಸೇಫ್ ಮದರ್ ಹುಡ್ ಪ್ರಾಜೆಕ್ಟ್ ಗಾಗಿ ಡಾ. ಕನಕ್ ಗೊಯೇಲ್ ಅವಾರ್ಡ್ ( Dr. Kanak Goel Award for Safe Motherhood Project) ಹಾಗೂ 2021-22 ರ ಐಎಮ್ಎ ವುಮನ್ ಡಾಕ್ಟರ್ಸ್ ವಿಂಗ್ ಚೇರ್ ಪರ್ಸನ್ಸ್ ಎಪ್ರಿಸಿಯೇಶನ್ ಅವಾರ್ಡ್ ( IMA Woman Doctors’ Wing Chairperson’s Appreciation Award ) ಎಂಬ ಎರಡು ಪ್ರಶಸ್ತಿ ಲಭಿಸಿದೆ.