ಭಕ್ತಿಭಾವ

ತಿರುಮಲದಲ್ಲಿ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ: ಟೋಕನ್ ಇಲ್ಲದೆ ಶ್ರೀವಾರಿ ಸರ್ವದರ್ಶನ

ನ್ಯೂಸ್ ನಾಟೌಟ್: ತಿರುಪತಿ ತಿರುಮಲ ದೇವರ ದರ್ಶನವನ್ನು ಪಡೆಯಲು ರಾಜ್ಯದ ಸಾಕಷ್ಟು ಭಕ್ತಾದಿಗಳು ಆಗಮಿಸುತ್ತಿದ್ದಾರೆ.ಇಲ್ಲಿನ ದೇವರ ದರ್ಶನ ಪಡೆದು ಭಕ್ತಾದಿಗಳೆಲ್ಲ ಪುನೀತರಾಗುತ್ತಿದ್ದಾರೆ. ನಂಬಿದವನಿಗೆ ಇಂಬು ನೀಡುವ ತಿಮ್ಮಪ್ಪನ ದರ್ಶನಕ್ಕಾಗಿ ಇತ್ತೀಚಿನ ದಿನಗಳಲ್ಲಿ ಭಕ್ತರು ಭಾರಿ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ತಿಮ್ಮಪ್ಪನ ದರ್ಶನಕ್ಕೆ ಅಪಾರ ಸಂಖ್ಯೆಯ ಭಕ್ತರು ತಿರುಮಲಕ್ಕೆ ಆಗಮಿಸಿ ಕಷ್ಟಗಳನ್ನು ದೂರ ಮಾಡುವಂತೆ ಬೇಡಿಕೊಳ್ಳುತ್ತಿದ್ದಾರೆ .ಶ್ರೀವಾರಿ ಸರ್ವದರ್ಶನಕ್ಕಾಗಿ 14 ಕಂಪಾರ್ಟ್ ಮೆಂಟ್ ಗಳಲ್ಲಿ ಭಕ್ತರು ಕಾದು ಕುಳಿತಿದ್ದಾರೆ. ಈ ನಿಟ್ಟಿನಲ್ಲಿ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ಟೋಕನ್ ಇಲ್ಲದೆ ಭಕ್ತರಿಗೆ ಶ್ರೀಗಳ ದರ್ಶನಕ್ಕೆ 24 ಗಂಟೆಗಳ ಕಾಲಾವಕಾಶ ನೀಡಿದೆ ಎಂದು ತಿಳಿದು ಬಂದಿದೆ. ಡಿ.18 ರಂದು 75,611 ಶ್ರೀವಾರಿ ದರ್ಶನ ಪಡೆದರು. ಭಾನುವಾರದ ಹುಂಡಿಯಲ್ಲಿ 3.55 ಕೋಟಿ ರೂ. ಆದಾಯ ಬಂದಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ.

Related posts

ನಾರಂಪಾಡಿ ಶ್ರೀ ಉಮಾಮಹೇಶ್ವರ ದೇವಳಕ್ಕೆ ನೂತನ ಧ್ವಜಸ್ತಂಭದ ಮೆರವಣಿಗೆ

ತುಳುನಾಡ ದೈವಗಳ ನಿಂದಿಸಿದವರಿಗೆ ಶಿಕ್ಷೆಯಾಗಲಿ ಭಗವಂತ..!

ಉಡುಪಿ ಪಡುಬಿದ್ರೆಯಲ್ಲೊಂದು ಕಾಂತಾರ ಕಥೆ,ದೈವಸ್ಥಾನ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದ ವ್ಯಕ್ತಿ ಹಠಾತ್ ನಿಧನ