ನ್ಯೂಸ್ ನಾಟೌಟ್ : ಕನ್ನಡ ಚಿತ್ರರಂಗದ ನಟಿ ಹರಿಪ್ರಿಯಾ, ವಸಿಷ್ಠ ನಿಶ್ಚಿತಾರ್ಥದ ಫೋಟೋ ಹೊರಬಿದ್ದಿದೆ. ಈ ಮೂಲಕ ಬಹು ಸಮಯಗಳಿಂದ ಈ ಜೋಡಿಯ ಬಗ್ಗೆ ಇದ್ದ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ.
ಹರಿಪ್ರಿಯಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋವನ್ನೇ ವಸಿಷ್ಠ ಸಿಂಹ ಕೂಡ ಹಂಚಿಕೊಂಡು, “ಎಂದೂ ನಿನ್ನ ನೆರಳಾಗಿ ಕಾಯುವೆ ನಾನು..!!” ಎಂದು ಕ್ಯಾಪ್ಶನ್ ನೀಡಿದ್ದರು. ಈ ಮೂಲಕ ಇಬ್ಬರ ನಡುವಿನ ಪ್ರೀತಿ ಅಂಕುರವಾಗಿರುವುದು ಬಹಿರಂಗಗೊಂಡಿತ್ತು. ಹರಿಪ್ರಿಯಾ ನಿವಾಸದಲ್ಲಿ ಡಿಸೆಂಬರ್ 3 ಕ್ಕೆ (ಇಂದು) ನಿಶ್ಚಿತಾರ್ಥ ನಡೆದಿದೆ. ಕುಟುಂಬಸ್ಥರು, ಸ್ನೇಹಿತರು ಮಾತ್ರ ಈ ನಿಶ್ಚಿತಾರ್ಥದಲ್ಲಿ ಭಾಗವಹಿಸಿದ್ದಾರೆ. ಊರು ತುಂಬೆಲ್ಲ ಸುದ್ದಿಯಾದರೂ ಕೂಡ ಇವರಿಬ್ಬರು ಬಾಯಿಬಿಟ್ಟು ಈ ವಿಷಯವನ್ನು ಹೇಳಿರಲಿಲ್ಲ. ಕೊನೆತನಕ ಎಲ್ಲೂ ಬಿಟ್ಟು ಕೊಡದೆ ಗೌಪ್ಯತೆ ಕಾಪಾಡಿಕೊಂಡಿರುವುದು ವಿಶೇಷವಾಗಿದೆ.