Uncategorized

ಪುರುಷರನ್ನೂ ಮೀರಿಸಿ ಗಡ್ಡ ಬೆಳೆಸಿ ಗಿನ್ನಿಸ್ ದಾಖಲೆ ಬರೆದ ಮಹಿಳೆ

ನ್ಯೂಸ್ ನಾಟೌಟ್ : ಪುರುಷರಿಗೆ ಗಡ್ಡವಿದ್ದರೆ ಲಕ್ಷಣ. ಗಡ್ಡ ಇರದಿದ್ದರೆ ಅವಲಕ್ಷಣ. ಕೆಲವರಿಗೆ ಗಡ್ಡ ಬಂದಿಲ್ಲ ಅನ್ನುವುದೇ ಚಿಂತೆ. ಹೀಗಿರುವಾಗ ಇಲ್ಲೊಬ್ಬ ಮಹಿಳೆ ಪುರುಷರನ್ನೂ ಮೀರಿಸಿ ಗಡ್ಡ ಬೆಳೆಸಿ ಇದೀಗ ಸುದ್ದಿಯಾಗಿದ್ದಾಳೆ. ಹೌದು ಇಲ್ಲೊಂದು ಮಹಿಳೆಯು ಕಳೆದ ೧೭ ವರ್ಷಗಳಿಂದ ಗಡ್ಡ ಬೆಳಸಿ ಅಚ್ಚರಿಗೆ ಪಾತ್ರವಾಗಿದ್ದಾಳೆ.

ಡಕೋಟಾ ಕೂಕ್ ಎಂಬ ಮಹಿಳೆಯ ದೇಹದಲ್ಲಿ ಹಾರ್ಮೋನ್ ಗಳ ಅಸಮತೋಲನದಿಂದ ಕಳೆದ ೧೭ ವ‍ರ್ಷಗಳಿಂದ ಗಡ್ಡ ಬೆಳೆಯುತ್ತಿದೆ. ಈಕೆಗೆ ೧೩ ವ‍ಯಸ್ಸು ಇದ್ದಾಗಲೇ ಗಡ್ಡ ಬೆಳೆಯಲು ಪ್ರಾರಂಭವಾಗಿತ್ತು. ಇದರಿಂದ ಗೆಳೆಯ ಗೆಳತಿಯರು ತಮಾಷೆ ಮಾಡುತ್ತಿದ್ದರು .ಇದರಿಂದ ಬೇಸೆತ್ತ ಮಹಿಳೆಯು ಪ್ರತೀ ವಾರ ಬ್ಯೂಟಿ ಪಾರ್ಲರ್ ಗೆ ತೆರಳಿ ಶೇವಿಂಗ್ ಮಾಡಿಸಿಕೊಳ್ಳುತ್ತಿದ್ದಳು. ಆದರೂ ಗಡ್ಡ ಮತ್ತಷ್ಟೂ ಹೆಚ್ಚು ಬೆಳೆಯುತಿತ್ತು. ಕೊನೆಗೆ ಗಡ್ಡ ಬೆಳೆಸಲು ಪ್ರಾರಂಭಿಸಿದಳು. ಈಕೆಯ ಪೊಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಪ್ರಪಂಚದಲ್ಲೇ ಗಡ್ಡದ ಮಹಿಳೆ ಎಂದು ಗಿನ್ನಸ್ ದಾಖಲೆಗೆ ಅರ್ಹಳಾಗಿದ್ದಾಳೆ.

Related posts

ಪೊಲೀಸರ ವಶದಲ್ಲಿದ್ದ ವ್ಯಕ್ತಿ ಪೊಲೀಸ್ ವಾಹನವನ್ನೇ ಬಳಸಿ ಎಸ್ಕೇಪ್ ..!,ಅಷ್ಟಕ್ಕೂ ಪೊಲೀಸರು ಈತನನ್ನು ವಶಕ್ಕೆ ಪಡೆದದ್ದೇಕೆ? ಮುಂದೇನಾಯ್ತು?

ಗ್ರಾಮ ಪಂಚಾಯತ್ ಅಧ್ಯಕ್ಷರು ಇನ್ಮುಂದೆ ಹಲ್ಲಿಲ್ಲದ ಹುಲಿ..!

ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಿ ಮನೆಯಲ್ಲೇ ಉತ್ತರ ಬರೆಯುವಂತೆ ಸೂಚನೆ ..! ಶಿಕ್ಷಕರ ಈ ನಡೆಗೆ ಪೋಷಕರು ಕೆಂಡಾಮಂಡಲ,ಪ್ರತಿಭಟನೆ..!