Uncategorized

ನಟಿ ಸಮಂತಾ ಬೆನ್ನಲ್ಲೇ ಮತ್ತೊಬ್ಬ ನಟಿಗೂ ಅನಾರೋಗ್ಯ

ನ್ಯೂಸ್ ನಾಟೌಟ್ : ಖ್ಯಾತ ಸಿನಿಮಾ ನಟಿ ಸಮಂತಾ ಅನಾರೋಗ್ಯಕ್ಕೆ ತುತ್ತಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ಇದೀಗ ಸಮಂತಾಳಿಗೆ ಆಗಿರುವ ಅನಾರೋಗ್ಯದ ಮಾದರಿಯಲ್ಲೇ ಮತ್ತೋರ್ವ ನಟಿಗೂ ಆರೋಗ್ಯ ಹಳಿ ತಪ್ಪಿದೆ.

ಹೌದು, ಇತ್ತೀಚೆಗೆ ಸಮಂತಾ ತಮ್ಮ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದರು. ಇವರು ಮಾರಾಣಾಂತಿಕ ಕಾಯಿಲೆಯ ವಿವರಗಳನ್ನು ಸಾಮಾಜಿಕ ಮಾಧ್ಯಮಾದಲ್ಲಿ ಪೋಸ್ಟ್ ಮಾಡಿದ್ದರು. ಅಭಿಮಾನಿಗಳು ಈ ಪೋಸ್ಟ್ ಬಹಳಷ್ಟು ನೊಂದುಕೊಂಡಿದ್ದರು. ಸಮಂತಾ ಅವರು ಮಯೋಟಿಸ್ ಎಂಬ ಮಾರಾಣಾಂತಿಕ ಕಾಯಿಲೆಯನ್ನು ಬಹಿರಂಗಪಡಿಸಿದಾಗ ಕೆಲವರು ಕಳವಳ ವ್ಯಕ್ತಪಡಿಸಿದರು. ಇವರು ಶೀಘ್ರದಲ್ಲೇ ಚೇತರಿಸಿಕೊಳ್ಳುತ್ತಾರೆ ಎಂದು ವೈದ್ಯರು ಹೇಳಿದ್ದಾರೆ.

ಆದರೆ ಇದೀಗ ಯಶೋದಾ ಚಿತ್ರದಲ್ಲಿ ನಟಿಸಿದ ಕಲ್ಪಿಕಾ ಗಣೇಶ್ ಸಮಂತಾಗೆ ಸೋಂಕು ತಗಲಿರುವ ಈ ಕಾಯಿಲೆ ಬಗ್ಗೆ ತಾನೂ ಕೂಡ ಅದೇ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಕಮೆಂಟ್ ಮಾಡಿದ್ದಾರೆ. ನಟಿ ಕಲ್ಪಿಕಾ ಹಲವು ಸಿನೆಮಾಗಳಲ್ಲಿ ನಟನೆ ಮಾಡಿದ್ದಾರೆ. ‘ಯಶೋದಾ’ ಸಿನಿಮಾದ ಕಾರ್ಯಕ್ರವೊಂದರಲ್ಲಿ ಭಾಗವಿಹಿಸಿದ ಕಲ್ಪಿಕಾ , ಸಮಂತಾ ರವರಂತೆ ತಾನೂ ಕೂಡ ಅಂತಹದೇ ಸಮಸ್ಯೆಯಿಂದ ಬಳಲುತ್ತಿದ್ದೇನೆ ಎಂದು ಹೇಳಿದ್ದರು. ಸಮಂತಾ ಅವರದ್ದು ಮೂರನೆ ಹಂತ ಆದರೆ ನನ್ನದು ಮೊದಲ ಹಂತ ಎಂದು ನಟಿ ಕಲ್ಪಿಕಾ ಹೇಳಿದ್ದಾರೆ. ಈ ಸಮಸ್ಯೆ ಬಗ್ಗೆ ಸಮಂತಾರವರೊಂದಿಗೆ ಮಾತನಾಡಲು ಪ್ರಯತ್ನಿಸುತ್ತಿದ್ದೇನೆ ಎಂದು ಹೆಳಿದ್ದಾರೆ. ನಟಿ ಸಮಂತಾ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೂ ‘ಯಶೋದಾ’ ಸಿನಿಮಾದಲ್ಲಿ ಸಮಂತಾ ಸಾಹಸ ದೃಶ್ಯಗಳನ್ನು ಮಾಡಿದ್ದಾರೆ. ಈ ಚಿತ್ರಕ್ಕೆ ಸಮಂತಾ ಆಸ್ಪತ್ರೆಯಿಂದಲೇ ಡಬ್ಬಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 

Related posts

ಪಶ್ಚಿಮ ಘಟ್ಟದ ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶಿಸಿ ಜೀಪು ಚಾಲನೆ, 10 ಜೀಪುಗಳ ವಶಕ್ಕೆ ಪಡೆದು 15 ಮಂದಿಯ ಮೇಲೆ ಪ್ರಕರಣ ದಾಖಲಿಸಿದ ಅರಣ್ಯ ಇಲಾಖೆ

ನ್ಯಾಯಾಂಗ ನಿಂದನೆ, ವಿಜಯ್ ಮಲ್ಯಗೆ 4 ತಿಂಗಳು ಜೈಲು ಶಿಕ್ಷೆ

ಹಸಿದು ಬಂದ ರಷ್ಯಾ ಯೋಧರಿಗೆ ವಿಷ ಉಣಿಸಿ ಕೊಂದ ಉಕ್ರೇನ್ ಅಜ್ಜಿ..!