ನ್ಯೂಸ್ ನಾಟೌಟ್: ಕೊಡಗು ಜಿಲ್ಲೆಯ ಮಡಿಕೇರಿ ಸೇರಿದಂತೆ ವಿವಿಧ ಕಡೆ ದೇವಸ್ಥಾನಗಳಿಗೆ ನುಗ್ಗುತ್ತಿರುವ ಕಳ್ಳರು ಅಲ್ಲಿರುವ ದೇವರ ಘಂಟೆ ಕದ್ದು ಪರಾರಿಯಾಗುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿದ್ದು ಇದೀಗ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಪೊಲೀಸರು ಎಷ್ಟೇ ಪ್ರಯತ್ನ ನಡೆಸಿದರೂ ಇವರು ಮಾತ್ರ ಕೈಗೆ ಸಿಗದೆ ಕಣ್ಮರೆಯಾಗುತ್ತಿದ್ದಾರೆ.
ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಶ್ರೀಭದ್ರಕಾಳಿ ದೇವಸ್ಥಾನದ ಹತ್ತು ಘಂಟೆಗಳನ್ನು ಕದ್ದೊ ಯ್ಯಲಾಗಿದ್ದು, ಚೋರರ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊ ಳಿಸಿದ್ದಾರೆ. ಗುರುವಾರ ರಾತ್ರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಘಂಟೆಗಳನ್ನು ಕಳವು ಮಾಡಿದ್ದಾರೆ. ಸಿ.ಸಿ. ಕ್ಯಾಮರ ವಯರ್ ಕತ್ತರಿಸಿ, ಗಂಟೆಗಳನ್ನು ಕಳವು ಮಾಡಿದ್ದಾರೆ . ಬೆಳಗ್ಗೆ ಊರಿನವರು ಪೂಜೆಗೆಂದು ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ದೇವಸ್ಥಾನದಲ್ಲಿದ್ದ ಸಿ.ಸಿ ಕ್ಯಾಮರ ಪರಿಶೀಲಿಸಿದಾಗ, ಇಬ್ಬರು ಕಳ್ಳರು ಒಳನುಗ್ಗಿ ಕಳ್ಳತನ ಮಾಡಿರುವುದು ಗೋ ಚರಿಸಿದೆ. ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಂಟೆ ಕಳವಿನ ಮೂರನೇ ಪ್ರಕರಣ ಇದಾಗಿದೆ. ಸ್ಥಳಕ್ಕೆ ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್ ಪೆಕ್ಟರ್ ನಾಗೇಶ್ ಖದ್ರಿ ಸೇರಿದಂತೆ ಸಿಬ್ಬಂದಿ, ಬೆರಳಚ್ಚು ತಜ್ಞರು, ಗೋಣಿಕೊಪ್ಪ ವೃತನಿರೀಕ್ಷಕ ಗೋ ವಿಂದರಾಜು, ಪೊನ್ನಂಪೇಟೆ ಠಾಣಾಧಿಕಾರಿ ಸುಬ್ರಹ್ಮಣಿ ಭೇಟಿ ನೀಡಿ ಪರಿಶೀಲಿಸಿದರು.