ದೇಶ-ವಿದೇಶವೈರಲ್ ನ್ಯೂಸ್

9 ಅಕ್ರಮ ಮಸೀದಿಗಳು ನೆಲಸಮ..! 103 ಎಕರೆ ಸರ್ಕಾರಿ ಭೂಮಿಯ ಅತಿಕ್ರಮಣದ ವಿರುದ್ಧ ಕಾರ್ಯಾಚರಣೆ..!

ನ್ಯೂಸ್‌ ನಾಟೌಟ್‌: ಸೋಮನಾಥ ದೇವಾಲಯದ ಸುತ್ತ ಅತಿಕ್ರಮಣ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದ್ದು, 9 ಮಸೀದಿ ಮತ್ತು ದರ್ಗಾ ಸೇರಿದಂತೆ 45 ವಸತಿ ಕಟ್ಟಡಗಳನ್ನು ತೆರವುಗೊಳಿಸಿದ ಘಟನೆ ಗುಜರಾತ್‌ ನಲ್ಲಿ ನಡೆದಿದೆ.

ಸೋಮನಾಥ ದೇವಾಲಯದ ಬಳಿಯ ಸರ್ಕಾರಿ ಭೂಮಿಯಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣವಾಗಿತ್ತು. ಈ ಭೂಮಿಯಲ್ಲಿ ಐವತ್ತಕ್ಕೂ ಹೆಚ್ಚು ಕಟ್ಟಡಗಳು ಮತ್ತು ಧಾರ್ಮಿಕ ಕೇಂದ್ರಗಳನ್ನು ನಿರ್ಮಿಸಲಾಗಿದೆ. ಎಲ್ಲಾ ಅತಿಕ್ರಮಣಗಳನ್ನೂ ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗುತ್ತಿದೆ.

1.5 ಕಿಮೀ ದೂರದಲ್ಲಿರುವ ಸೋಮನಾಥ ದೇವಾಲಯದ ಬಳಿ 103 ಎಕರೆ ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡಿರುವುದು ಪೊಲೀಸ್ ಮತ್ತು ಆಡಳಿತಾತ್ಮಕ ಕಾರ್ಯಾಚರಣೆಯಲ್ಲಿ ಬಯಲಾಗಿದೆ. ಈ ಅತಿಕ್ರಮಣ ವಿರೋಧಿ ಕಾರ್ಯಾಚರಣೆ ಭಾಗವಾಗಿ 45 ವಸತಿ ಕಟ್ಟಡಗಳ ಜೊತೆಗೆ ಒಂಬತ್ತು ಧಾರ್ಮಿಕ ಸ್ಥಳಗಳನ್ನು ಕೆಡವಲಾಯಿತು. ಸುಮಾರು 320 ಕೋಟಿ ಮೌಲ್ಯದ ಅಂದಾಜು 102 ಎಕರೆ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ.

Related posts

ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ ಎಸೆದ ಬೆಂಗಳೂರಿನವರಿಗೆ 5 ಸಾವಿರ ರೂ. ದಂಡ ಜಡಿದ ಉಬರಡ್ಕ ಪಿಡಿಒ, ಇಂತಹ ಅಧಿಕಾರಿಗಳ ಸಂಖ್ಯೆ ಮತ್ತಷ್ಟು ಹೆಚ್ಚಲಿ

ಚಿಕ್ಕಮಗಳೂರು ಪ್ರವಾಸವನ್ನು15 ದಿನ ಮುಂದೂಡುವಂತೆ ಜಿಲ್ಲಾಡಳಿತ ಮನವಿ..! ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಲ್ಲಿ ಮಳೆಯ ಜೊತೆ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮುನ್ಸೂಚನೆ..!

ಗನ್ ​ನಿಂದ ತನ್ನ ಕಾಲಿಗೆ ಶೂಟ್ ಮಾಡಿಕೊಂಡ ಬಾಲಿವುಡ್ ನ ಖ್ಯಾತ ನಟ..! ಐಸಿಯುನಲ್ಲಿ ಚಿಕಿತ್ಸೆ..!