ಕರಾವಳಿಸುಳ್ಯ

7ನೇ ವರ್ಷದ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ -2023, ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರಿನ ವಿದ್ಯಾರ್ಥಿಗಳಿಂದ ರಾಷ್ಟ್ರಮಟ್ಟದ ಸಾಧನೆ

ನ್ಯೂಸ್ ನಾಟೌಟ್ :ಅಗಸ್ಟ್.5ರಂದು ಆನ್‌ಲೈನ್ ಮುಖೇನ ನಡೆದ ರಾಷ್ಟ್ರ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗುತ್ತಿಗಾರು ವತಿಯಿಂದ ನಡೆಸಲ್ಪಡುವ ಅಮರ ಯೋಗ ಕೇಂದ್ರದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.

ಹವಿಕ್ಷಾ. ಎಸ್. ಆರ್ – ತೃತೀಯ ಸ್ಥಾನ,ಜಿಶಾ. ಕೆ. ಕೆ.- ತೃತೀಯ ಸ್ಥಾನ,ರಮಿಕ್ಷ ಮೇನಾಜೆ – ಚತುರ್ಥ ಸ್ಥಾನ,ಖುಷಿ. ಕೆ. ಎಂ – ಪಂಚಮ ಸ್ಥಾನ ಹಾಗೂ ನಿಹಾನಿ. ವಿ – ಪಂಚಮ ಸ್ಥಾನ ಮತ್ತು ಭಾಗವಹಿಸಿದ ಹವ್ಯಾಸ್. ಕೆ. ಟಿ., ಹರ್ಷಿಣಿ. ಕೆ. ಟಿ. ಮನ್ವಿಸ್. ಕೆ. ಆರ್. ತನುಷ್. ಕೆ. ಇವರಿಗೆ ಸಮಾಧಾನಕರ ಬಹುಮಾನ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಯೋಗ ಶಿಕ್ಷಣ ಶಿಕ್ಷಕ ಶರತ್ ಮರ್ಗಿಲಡ್ಕ, ನಿವೃತ್ತ ಸೈನಿಕರಾದ ಶ್ರೀಮತಿ ಅನಿತಾ ಮಹೇಶ್, ಮಹೇಶ್ ಕೊಪ್ಪತಡ್ಕ,ವಿನಯ್ ಮಾಡಬಾಕಿಲು, ಕೇಶವ ಕಡೋಡಿ, ರವೀಂದ್ರ ಕೋಡೊಂಬು, ಪ್ರಶಾಂತ್ ವಾಲ್ತಾಜೆ, ರೋಹಿತ್. ಎಸ್. ಪಿ. ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

Related posts

ಸುಳ್ಯ: ನಿಲ್ಲಿಸಿದ್ದ ವ್ಯಾನ್ ಗೆ ಹಿಂದಿನಿಂದ ಬಂದ ಬೈಕ್ ಡಿಕ್ಕಿ, ರಸ್ತೆಗೆ ಎಸೆಯಲ್ಪಟ್ಟ ಇಬ್ಬರು ಸವಾರರಿಗೆ ಗಾಯ, ಆಸ್ಪತ್ರೆಗೆ ದಾಖಲು

ದ.ಕ. ಜಿಲ್ಲೆಯ ರೈತರಿಗೆ ಸಿಹಿ ಸುದ್ದಿ ನೀಡಿದ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್.

ಬೆಳ್ತಂಗಡಿ:ಎಟಿಎಂಗೆ ಸಹಾಯ ಮಾಡಲು ಬಂದವನಿಂದಲೇ 1 ಲಕ್ಷ ರೂ. ವಂಚನೆ..!,ವ್ಯಕ್ತಿ ಹೇಳಿದಷ್ಟು ಹಣ ಕೊಟ್ಟು ಕಾರ್ಡ್‌ ಬದಲಿಸಿದ ಅಪರಿಚಿತ..!ಏನಿದು ಘಟನೆ?