ಕರಾವಳಿಕ್ರೈಂದೇಶ-ವಿದೇಶವೈರಲ್ ನ್ಯೂಸ್

6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಯುವುದನ್ನು ತಡೆದ ಮಂಗಗಳು..! ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಗುವಿನ ಬಟ್ಟೆ ಕಳಚಿದ್ದ ಆರೋಪಿ..!

ನ್ಯೂಸ್ ನಾಟೌಟ್: ಎಲ್ ಕೆಜಿ ಓದುತ್ತಿದ್ದ 6 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಯತ್ನ ನಡೆದಿದ್ದು, ಇದನ್ನು ವಾನರಸೇನೆ ವಿಫಲಗೊಳಿಸಿದ ಘಟನೆ ಉತ್ತರಪ್ರದೇಶದ ಬಾಗ್ ಪಥ್ ನಲ್ಲಿ ಬೆಳಕಿಗೆ ಬಂದಿದೆ. ಪೋಷಕರ ದೂರಿನ ಮೇಲೆ ಅಪರಿಚಿತ ವ್ಯಕ್ತಿಯ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ವ್ಯಕ್ತಿಯೊಬ್ಬ ಬಾಲಕಿಯನ್ನು ಪುಸಲಾಯಿಸಿ ನಿರ್ಜನವಾಗಿದ್ದ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಆಕೆಯ ಬಟ್ಟೆ ಕಳಚಿ ಲೈಂಗಿಕ ಕಿರುಕುಳ ನೀಡಲು ಮುಂದಾದಾಗ ಕೆಲ ಮಂಗಗಳು ರಭಸದಿಂದ ಅಲ್ಲಿಗೆ ಧಾವಿಸಿದವು. ಇದರಿಂದ ಆರೋಪಿ, ಬಾಲಕಿಯನ್ನು ಅಲ್ಲೇ ಬಿಟ್ಟು ಪರಾರಿಯಾದ ಎಂದು ಬಾಲಕಿಯ ಪೋಷಕರು ದೂರಿನಲ್ಲಿ ವಿವರಿಸಿದ್ದಾರೆ.

ಮನೆಗೆ ಮರಳಿದ ಬಾಲಕಿ ಘಟನೆಯನ್ನು ಕುಟುಂಬದವರಿಗೆ ವಿವರಿಸಿದ್ದು, ಹೇಗೆ ಮಂಗಗಳು ತನ್ನನ್ನು ಆರೋಪಿಯಿಂದ ರಕ್ಷಿಸಿತು ಎನ್ನುವುದನ್ನು ತಿಳಿಸಿದ್ದಾಳೆ.
“ಆತನನ್ನು ಇನ್ನೂ ಪತ್ತೆ ಮಾಡಿಲ್ಲ. ಬಾಲಕಿಗೆ ಪ್ರಾಣ ಬೆದರಿಕೆಯನ್ನೂ ಒಡ್ಡಿದ್ದ.. ಮಂಗಗಳ ಹಿಂಡು ಮಧ್ಯಪ್ರವೇಶಿಸದೇ ಇದ್ದಿದ್ದರೆ ನಮ್ಮ ಮಗಳನ್ನು ಆತ ಕೊಂದುಹಾಕುತ್ತಿದ್ದ” ಎಂದು ಬಾಲಕಿಯ ತಂದೆ ಹೇಳಿದ್ದಾರೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

https://newsnotout.com/2024/09/doctor-and-kerala-judge-conflict-in-sullia-kannada-news-viral-news-fir/

Related posts

ಗೋಳಿತ್ತೊಟ್ಟು:ಕುಡಿದು ಸರ್ಕಾರಿ ಬಸ್​ನಲ್ಲೇ ಬಿದ್ದ ಗ್ರಾಮಕರಣಿಕ..! ಕುಡುಕನನ್ನು ಕಂಡು ಬಸ್​ ಚಾಲಕ ಏನು ಮಾಡಿದ್ರು ಗೊತ್ತಾ?

ಹೆಲಿಕಾಪ್ಟರ್ ಏರುವಾಗ ದೊಪ್ಪನೆ ಕೆಳಕ್ಕೆ ಬಿದ್ದ ಸಿಎಂ, ವಿಡಿಯೋ ವೈರಲ್

ಕಡಬ:ಇಬ್ಬರನ್ನು ಬಲಿ ಪಡೆದ ರೆಂಜಿಲಾಡಿಯಲ್ಲಿ ಮತ್ತೆ ಕಾಡಾನೆಗಳು ಪ್ರತ್ಯಕ್ಷ ,ದೊಡ್ಡ ಆನೆಯೊಂದಿಗೆ ಸಂಚರಿಸುತ್ತಿರುವ ಮರಿಯಾನೆ-ವಿಡಿಯೋ ವೈರಲ್