ನ್ಯೂಸ್ ನಾಟೌಟ್: ಒಂದು ವರ್ಷದಲ್ಲಿ ಎಷ್ಟು ನಾಣ್ಯಗಳನ್ನು ಮುದ್ರಿಸಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಇದರ ನಂತರ, ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕ್ ಅನ್ನು ನಿರ್ದೇಶಿಸುತ್ತದೆ. ನಂತರ ಭಾರತೀಯ ರಿಸರ್ವ್ ಬ್ಯಾಂಕ್ ನಾಣ್ಯಗಳನ್ನು ಮುದ್ರಿಸುತ್ತದೆ. ಇದರ ನಡುವೆ 5 ರೂ. ನಾಣ್ಯ ಇನ್ನು ಮುಂದೆ ಚಲಾವಣೆಯಲ್ಲಿ ಇರುವುದಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
ನಾಣ್ಯ ಅಥವಾ ನೋಟು ಸ್ಥಗಿತಗೊಂಡಿದ್ದರೂ ಅಥವಾ ಬಿಡುಗಡೆ ಪ್ರಕ್ರಿಯೆಯಲ್ಲಿದ್ದರೂ, ಆರ್‌ಬಿಐ ಕೇಂದ್ರ ಸರ್ಕಾರದ ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಭಾರತೀಯ ರಿಸರ್ವ್ ಬ್ಯಾಂಕ್ ಆಗ ಮಾತ್ರ ನಾಣ್ಯಗಳು ಅಥವಾ ನೋಟುಗಳನ್ನು ನಿಷೇಧಿಸಬಹುದು. ಪ್ರಸ್ತುತ ಭಾರತದಲ್ಲಿ 1 ರೂಪಾಯಿಯಿಂದ 20 ರೂಪಾಯಿವರೆಗಿನ ನಾಣ್ಯಗಳು ಚಲಾವಣೆಯಲ್ಲಿವೆ. ಈ ನಡುವೆ 30 ಮತ್ತು 50 ರೂಪಾಯಿಗಳ ನಾಣ್ಯಗಳ ಚಲಾವಣೆಗೆ ತರುವ ಬಗ್ಗೆ ಮಾತು ಕೇಳಿ ಬರುತ್ತಿದೆ.
ಇನ್ನು 5 ರೂಪಾಯಿ ನಾಣ್ಯ ರದ್ದು ಮಾಡುವುದಾಗಿ ಘೋಷಣೆ ಮಾಡಿರುವುದು ಭಾರೀ ಸದ್ದು ಮಾಡುತ್ತಿದೆ. ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ರೂ.5 ರದ್ದತಿಗೆ ಪ್ರಯತ್ನ ಆರಂಭಿಸಿವೆ ಎಂದು ವರದಿಯಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
5 ರೂಪಾಯಿ ನಾಣ್ಯಗಳಿಂದ 4-5 ಬ್ಲೇಡ್ ಗಳನ್ನು ಮಾಡಬಹುದು ಎಂಬ ವದಂತಿ ಹರಿದಾಡುತ್ತಿದೆ. ಅದರ ನಂತರ, ಕೆಲವರು ಈಗಾಗಲೇ 5 ರೂಪಾಯಿ ನಾಣ್ಯಗಳೊಂದಿಗೆ ಬ್ಲೇಡ್‌ಗಳನ್ನು ತಯಾರಿಸಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಇಂತಹ ಹಲವು ದುರುಪಯೋಗವನ್ನು ತಡೆಯಲು ಈ ಚಿಂತನೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.
Click