Uncategorized

ನೀವು ನೀರಜ್ ಹೆಸರಿನವರೇ? ಹಾಗಿದ್ದರೆ ಸ್ವಾತಂತ್ರ್ಯ ದಿನದಂದು 5 ಲೀಟರ್‌ ಪೆಟ್ರೋಲ್‌ ನಿಮಗೆ ಉಚಿತ..!

ಮಂಗಳೂರು: ಟೋಕಿಯೋ ಒಲಿಂಪಿಕ್ಸ್ ನ ಜಾವೆಲಿನ್ ಥ್ರೋನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದು ಭಾರತೀಯರ ಮನ ಗೆದ್ದಿರುವ ನೀರಜ್ ಚೋಪ್ರಾಗೆ ಎಲ್ಲೆಡೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದರ ಬೆನ್ನಲ್ಲೇ ಇದೀಗ ಕೇರಳದ ಪೆರ್ಲದಲ್ಲಿರುವ ಕುದುಕೊಳಿ ಪೆಟ್ರೋಲ್‌ ಬಂಕ್ ಮಾಲೀಕ ಅಬ್ದುಲ್‌ ಮದುಮೂಲೆ ಅವರು ನೀರಜ್ ಹೆಸರಿನವರಿಗೆ ಆಗಸ್ಟ್‌ 15 ರಂದು ಉಚಿತವಾಗಿ ತಮ್ಮ ಬಂಕ್ ನಲ್ಲಿ 5 ಲೀಟರ್‌ ಪೆಟ್ರೋಲ್‌ ನೀಡುವುದಾಗಿ ತಿಳಿಸಿದ್ದಾರೆ. ನೀರಜ್ ಅನ್ನುವ ಹೆಸರಿನವರು ಬಂಕ್ ಗೆ ಹೋಗಿ ಆಧಾರ್ ಕಾರ್ಡ್‌ ತೋರಿಸಿ ಐದು ಲೀಟರ್‌ ಪೆಟ್ರೋಲ್‌ ಉಚಿತವಾಗಿ ಪಡೆಯಬಹುದು. ಪ್ರತಿ ಸಲವೂ ಅಬ್ದುಲ್‌ ಅವರು ವಿಶೇಷವಾಗಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಾರೆ. ಈ ಸಲ ನೀರಜ್ ಹೆಸರಲ್ಲಿ ಆಚರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

Related posts

ಸುಳ್ಯ: ಡಿಕೆಶಿಗೆ ಬೈದವನಿಗೆ ಜೈಲು ಶಿಕ್ಷೆ

ಸ್ಯಾಂಟ್ರೋ ರವಿ ಬಂಧನಕ್ಕೆ ಹರಕೆ ಹೊತ್ತ ಎಡಿಜಿಪಿ,ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ ಅಲೋಕ್ ಕುಮಾರ್

ದುರಂತ ಅಂತ್ಯ ಕಂಡ ಪುಟ್ಟ ಕಂದಮ್ಮ ಪ್ರಕರಣಕ್ಕೆ ಬಿಗ್ ಟ್ವಿಸ್ಟ್..!ಕಿಮ್ಸ್ ವೈದ್ಯಕೀಯ ಅಧೀಕ್ಷಕ ಹೇಳಿದ್ದೇನು?